ಕೋಟ ಡಾ.ಕಾರಂತ ಥೀಂ ಪಾರ್ಕ್‌ನಲ್ಲಿ ಉಚಿತ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾಥಿಗಳ ವಾರ್ಷಿಕೋತ್ಸವವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಆನಂದ. ಸಿ.ಕುಂದರ್, ಸತೀಶ ಕುಂದರ್, ಸದಾನಂದ ಜಿ, ರವೀಂದ್ರ ರಾವ್ ಇದ್ದರು.  
ಉಡುಪಿ

ವಿದ್ಯಾರ್ಥಿಗಳಿಗೆ ಕಲಿಸಿ ರಂಗಕಲೆ

ಇಂದಿರಾ ಎನ್ ಕೆ
ಕೋಟ: ನಮ್ಮ ನಾಡಿನ ಹಿರಿಯರು ಕಂಡು ಹಿಡಿದು ಪೋಷಿಸಿಕೊಂಡು ಬಂದ ಯಕ್ಷಗಾನದಂತಹ ಶ್ರೇಷ್ಠ ಕಲೆಯ ಪರಿಚಯ ವಾಹಿತಿಗಳನ್ನು ಇಂದಿನ ಯುವ ಜನತೆ, ವಿದ್ಯಾರ್ಥಿಗಳಿಗೆ ಕಲಿಸುವುದು ಅಗತ್ಯವಾಗಿದೆ. ಇಂತಹ ಕಾರ್ಯಗಳನ್ನು ಯಕ್ಷಾಂತರಂಗ ಸಂಸ್ಥೆಯವರು ಉಚಿತ ತರಬೇತಿ ಕೇಂದ್ರದ ಮೂಲಕ ಈ ಕಾರಂತ ಥೀಂ ಪಾರ್ಕ್‌ನಲ್ಲಿ ಹನ್ನೊಂದು ವರ್ಷಗಳಿಂದ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ ಡಾ.ಕಾರಂತ ಥೀಂ ಪಾರ್ಕ್‌ನಲ್ಲಿ ಕೋಟ ಯಕ್ಷಾಂತರಂಗ ವ್ಯವಸಾಯೀ ಯಕ್ಷ ತಂಡ ನೇತೃತ್ವದಲ್ಲಿ ಭಾನುವಾರ ಉಚಿತ ಯಕ್ಷಗಾನ ತರಬೇತಿ ಕೇಂದ್ರದ 2025-26ನೇ ಸಾಲಿನಲ್ಲಿ ತರಬೇತಿ ಪಡೆದ ವಿದ್ಯಾಥಿಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ 2025-26ರ ಸಾಲಿನ ದತ್ತಿ ಪ್ರಶಸ್ತಿ ಪುರಸ್ಮತರಾದ ಯಕ್ಷಗುರು ದೇವದಾಸ ರಾವ್ ಕೂಡ್ಲಿ ಅವರನ್ನು ಅಭಿನಂದಿಸಲಾಯಿತು. ಯಕ್ಷಾಂತರಂಗ ಸಂಸ್ಥೆ ಅಧ್ಯಕ್ಷ ಆನಂದ. ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು.
ಮಣೂರು ಮಹಾಲಿಂಗೇಶ್ವರ ದೇಗುಲ ಅಧ್ಯಕ್ಷ ಸತೀಶ ಕುಂದರ್, ಉದ್ಯಮಿ ಸದಾನಂದ.ಜಿ, ಕೋಟತಟ್ಟು ಪಿಡಿಒ ರವೀಂದ್ರ ರಾವ್, ಕೋಟತಟ್ಟು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಸತೀಶ ಕುಂದರ್, ಸಂಸ್ಥೆ ಕಾರ್ಯಾಧ್ಯಕ್ಷ ಸುಬ್ರಾಯ ಆಚಾರ್ಯ ಮಣೂರು ಉಪಸ್ಥಿತರಿದ್ದರು.
ಸಂಸ್ಥೆ ಕಾರ್ಯದರ್ಶಿ ಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ಪ್ರಾಸ್ತಾವಿಕ ವಾತನ್ನಾಡಿ ಸ್ವಾಗತಿಸಿದರು. ಉಪನ್ಯಾಸಕ ರಾವೇಂದ್ರ ತುಂಗ ಕೋಟ ನಿರೂಪಿಸಿ, ವಂದಿಸಿದರು.