ತರಂಗಿಣಿ ಮಿತ್ರಮಂಡಳಿ ವತಿಯಿಂದ ಸಮರ್ಥ್ ಜೋಶಿ, ಅನಘಾ ಕಾವೂರ್, ಕೃತಿ ಜಿ.ರಾವ್, ಪ್ರದ್ಯುಮ್ನ ರಾವ್ ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಪ್ರಮುಖರಾದ ಶ್ರೀಕಾಂತ್ ಉಪಾಧ್ಯಾಯ, ರಾವೇಂದ್ರ ರಾವ್, ಸದಾಶಿವ ಆಚಾರ್ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಷ್ಟದ ಪರಂಪರೆ ನಂತರವಷ್ಟೇ ಎಲ್ಲರಿಗೂ ಸುಖವಿರುತ್ತದೆ. ಅರ್ಹರಿಗೆ ತರಂಗಿಣಿ ಸಹಾಯ ಮಾಡಿದೆ. ಸಂಸ್ಥೆಯ ಒಳ್ಳೆಯ ತತ್ವಗಳು ಅನುಕರಣೀಯ ಎಂದು ಬಹುಭಾಷಾ ವಿದ್ವಾಂಸ ರಾವೇಂದ್ರ ರಾವ್ ಹೇಳಿದರು.
ಪಡುಬಿದ್ರಿ ಮಧ್ವನಗರ ತರಂಗಿಣಿ ಮಿತ್ರ ಮಂಡಳಿ ವತಿಯಿಂದ ಮಧ್ವನಗರ ಸಂಸ್ಕೃತಿಯಲ್ಲಿ ಭಾನುವಾರ ನಡೆದ 14ನೇ ವರ್ಷದ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಆರೋಗ್ಯ ನಿಧಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಸಮರ್ಥ್ ಜೋಶಿ, ಅನಘಾ ಕಾವೂರ್, ಕೃತಿ ಜಿ.ರಾವ್, ಪ್ರದ್ಯುಮ್ನ ರಾವ್ ಅವರಿಗೆ ಪ್ರತಿಭಾ ಪುರಸ್ಕಾರ, 1 ಲಕ್ಷ ಇಪ್ಪತ್ತು ಸಾವಿರ ಮೊತ್ತದ ವಿದ್ಯಾನಿಧಿ, ನಾಗೇಶ್ ಉಪಾಧ್ಯಾಯರಿಗೆ ಆರೋಗ್ಯ ನಿಧಿ ವಿತರಿಸಲಾಯಿತು. ಗ್ರಾಮ ದೇಗುಲದ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಮೃದುಲಾ ರಾವೇಂದ್ರ ರಾವ್ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ, ಸಂಸ್ಥೆಯ ಗೌರವಾಧ್ಯಕ್ಷ ಸದಾಶಿವ ಆಚಾರ್ಯ ಮಾತನಾಡಿದರು. ಕಾರ್ಯದರ್ಶಿ ಗಣೇಶ್ ರಾವ್ ವೈ.ಎಸ್., ಕೋಶಾಧಿಕಾರಿ ಗೋವಿಂದ ರಾವ್, ಕಾರ್ಯದರ್ಶಿ ಗಣೇಶ್ ರಾವ್ ವೈ.ಎಸ್., ಯಾದವೇಂದ್ರ ಉಪಾಧ್ಯಾಯ ಮೊದಲಾದವರಿದ್ದರು. ತರಂಗಿಣಿ ಮಿತ್ರ ಮಂಡಳಿ ಅಧ್ಯಕ್ಷ ರವಾಕಾಂತ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಶೈಲೆಂದ್ರ ಉಪಾಧ್ಯಾಯ ಪ್ರಸ್ತಾವಿಸಿದರು. ಶ್ರೀಧರ್ ಆಚಾರ್ ನಿರೂಪಿಸಿದರು. ಅಕಾಲಿ ಸುರೇಶ್ ರಾವ್ ವಂದಿಸಿದರು.