ಬಾರ್ಕೂರು ನಡುಮನೆ ಕಂಬಳ ಮಹೋತ್ಸವಕ್ಕೆ ಈ ಬಾರಿ ‘ಗತವೈಭವ’ ಚಿತ್ರದ ನಾಯಕ ನಟ ದುಷ್ಯಂತ್, ನಾಯಕ ನಟಿ ಆಶಿಕಾ ರಂಗನಾಥ್ ಹಾಗೂ ಚಿತ್ರದ ತಾಂತ್ರಿಕ ತಂಡದವರು ಭಾಗವಹಿಸಿ ತಾರಾ ಮೆರಗು ನೀಡಿದ್ದಾರೆ.  
ಉಡುಪಿ

ಬಾರ್ಕೂರು ನಡುಮನೆ ಕಂಬಳಕ್ಕೆ ತಾರಾ ಮೆರುಗು

ಬ್ರಹ್ಮಾವರ: ಇತಿಹಾಸ ಪ್ರಸಿದ್ಧ ಬಾರ್ಕೂರು ನಡುಮನೆ ಕಂಬಳ ಮಹೋತ್ಸವಕ್ಕೆ ಈ ಬಾರಿ ‘ಗತವೈಭವ’ ಚಿತ್ರದ ನಾಯಕ ನಟ ದುಷ್ಯಂತ್, ನಾಯಕ ನಟಿ ಆಶಿಕಾ ರಂಗನಾಥ್ ಹಾಗೂ ಚಿತ್ರದ ತಾಂತ್ರಿಕ ತಂಡದವರು ಭಾಗವಹಿಸಿ ತಾರಾ ಮೆರಗು ನೀಡಿದ್ದಾರೆ.
ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ 70 ಜತೆ ಕೋಣಗಳು ಭಾಗವಹಿಸಿದ್ದವು. ಭಾಗವಹಿಸಿದ ಎಲ್ಲ ಕೋಣಗಳ ವಾಲೀಕರಿಗೆ ಗೌರವ ಪುರಸ್ಕಾರ ನೀಡಲಾಯಿತು. ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಬಾರಕೂರು ಶಾಂತರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಮುಖ್ಯಶಿಕ್ಷಕ ಅಶೋಕ್ ಕುವಾರ್ ಶೆಟ್ಟಿ ಸ್ವಾಗತಿಸಿ, ಪ್ರವೀಣ್ ಶೆಟ್ಟಿ ವಂದಿಸಿದರು. ವಿಶ್ವನಾಥ ಪ್ರಭು, ದೇವು ಹೊಸ್ಕೆರೆ, ರವಿ ಹೆವ್ಮಾಡಿ, ಅಭಿಜಿತ್ ಪಾಂಡೇಶ್ವರ, ರಾಮಚಂದ್ರ ಕಾಮತ್, ಶಾಂತಾರಾಮ ಶೆಟ್ಟಿ ಹಂದಾಡಿ, ಸದಾಶಿವ ಪೂಜಾರಿ ಮೂಡುಹಿತ್ಲು, ಪ್ರಶಾಂತ್ ದೇವಾಡಿಗ ಸಹಕರಿಸಿದರು.

ಫಲಿತಾಂಶ

ಸಬ್ ಜೂನಿಯರ್ ವಿಭಾಗ: ಶ್ರೀ ದುರ್ಗಾ ಕೂಡ್ಲಿ ಗುರುರಾಜ ನಾಯ್ಕ(ಪ್ರ) ಓಡಿಸಿದವರು: ಭರತ್ ನಾಯ್ಕ, ಬಾಬಣ್ಣ ನಾಯ್ಕ, ಕೊಕ್ಕರ್ಣೆ(ದ್ವಿ) ಓಡಿಸಿದವರು: ಹರೀಶ್ ಭಟ್ಕಳ.
ಹಗ್ಗ ಕಿರಿಯ: ಸಮೃದ್ಧಿ ಪ್ರಸಿದ್ಧಿ ದುರ್ಗಾ ಫ್ರೆಂಡ್ಸ್ ಕಂಚಿಕಾನ(ಪ್ರ) ಓಡಿಸಿದವರು: ಶಂಕರ ನಾಗೂರು, ನೀರಜ್ ಆತ್ಮಜ್ ಬಾರ್ಕೂರು(ದ್ವಿ) ಓಡಿಸಿದವರು ವಿಶ್ವನಾಥ ದೇವಾಡಿಗ.
ಹಗ್ಗ ಹಿರಿಯ: ಬೈಂದೂರು ಸಸಿಹಿತ್ಲ್ ವೆಂಕಟ ಪೂಜಾರಿ(ಪ್ರ) ಓಡಿಸಿದವರು: ಶ್ರೀಕಾಂತ್, ಬಾಬಣ್ಣ ನಾಯ್ಕ ಕೊಕ್ಕರ್ಣೆ ವಡ್ಡಪ್ಪೆ(ದ್ವಿ) ಓಡಿಸಿದವರು: ಶ್ರೀಕಾಂತ್.
ಹಲಗೆ ವಿಭಾಗ: ಆತ್ಮಜ್ ನೀರಜ್ ಬಾರಕೂರು(ಪ್ರ) ಓಡಿಸಿದವರು: ರಾವೇಂದ್ರ, ಅದ್ವಿನ್ ರವಿರಾಜ್ ಶೆಟ್ಟಿ ನೆರಳಕಟ್ಟೆ ಕೊಡ್ಲಾಡಿ(ದ್ವಿ) ಓಡಿಸಿದವರು: ಗಣೇಶ್ ಉಳ್ಳೂರು.