ಉಡುಪಿಯ ತೆಂಕನಿಡಿಯೂರು ಕಾಲೇಜ್​ನ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಮಾಹಿತಿ ನೀಡಿದ ಡಾ. ಲತಾ ನಾಯಕ್​ ಅವರನ್ನು ಪ್ರೊ. ನಿತ್ಯಾನಂದ ವಿ. ಗಾಂವ್ಕರ ಗೌರವಿಸಿದರು. ಎಚ್​. ನಾಯ್ಕರ, ಕ್ಯಾಥರಿನ್​ ಜೆನಿಫರ್​, ವಸಂತಿ ಆರ್​. ನಾಯಕ, ಡಾ. ಶ್ರೀಧರ್​ ಭಟ್​, ಸುಷ್ಮಾ ಟಿ., ಡಾ. ಶ್ರೀದೇವಿ ಕೆ., ಡಾ.ಗಣೇಶಪ್ರಸಾದ ಜಿ. ನಾಯಕ ಇದ್ದರು. 
ಉಡುಪಿ

ದೈಹಿಕ, ಮಾನಸಿಕ ಆರೋಗ್ಯದ ಕಾಳಜಿ ವಹಿಸಿ

* ವಿದ್ಯಾರ್ಥಿಗಳಿಗೆ ಡಾ. ಲತಾ ನಾಯಕ ಸಲಹೆ

* ತೆಂಕನಿಡಿಯೂರು ಕಾಲೇಜ್​ನಲ್ಲಿ ಜಾಗೃತಿ

ಉಡುಪಿ: ಕೋವಿಡ್​ ನಂತರದ ದಿನಗಳಲ್ಲಿ ಮಾನಸಿಕ ಆರೋಗ್ಯದ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಂದಿನ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಕಾಳಜಿ ವಹಿಸಿ ಆರೋಗ್ಯವಂತ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಲತಾ ನಾಯಕ ಸಲಹೆ ನೀಡಿದರು.

ಉಡುಪಿ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎವಿ ಸಭಾಂಗಣದಲ್ಲಿ ಐಕ್ಯೂಎಸಿ ಹಾಗೂ ಅಭ್ಯುದಯ ಸಮಾಜಕಾರ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನದ ನಿಮಿತ್ತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾಗೃತಿ ಅಗತ್ಯ

ಕಾಲೇಜ್​ನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವ್ಕರ ಮಾತನಾಡಿ, ಮಾನಸಿಕ ಆರೋಗ್ಯದ ಕುರಿತು ಮುಕ್ತವಾಗಿ ಚರ್ಚೆಯಾದರೆ ಮಾತ್ರ ಸೂಕ್ತ ಚಿಕಿತ್ಸೆ ಕಂಡುಕೊಳ್ಳಲು ಸಾಧ್ಯ. ಪ್ರಸ್ತುತ ಕಾಲಘಟ್ಟದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.

ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಚ್​.ನಾಯ್ಕರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್​ ಸೈಕೋಲಾಜಿಸ್ಟ್​ ಕ್ಯಾಥರಿನ್​ ಜೆನಿಫರ್​, ಸೈಕಾಟ್ರಿಕ್​ ಸೋಶಿಯಲ್​ ವರ್ಕರ್​ ವಸಂತಿ ಆರ್​. ನಾಯಕ, ಸ್ನಾತಕೋತ್ತರ ವಿಭಾಗದ ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್​ ಭಟ್​, ಸ್ನಾತಕೋತ್ತರ ಸಮಾಜಕಾರ್ಯ ಸಂಯೋಜಕಿ ಡಾ. ಶ್ರೀದೇವಿ ಕೆ., ಅಭ್ಯುದಯ ಸಮಾಜಕಾರ್ಯ ವೇದಿಕೆಯ ಸಹಸಂಯೋಜಕ ಡಾ.ಗಣೇಶಪ್ರಸಾದ ಜಿ. ನಾಯಕ, ಅಭ್ಯುದಯ ಸಮಾಜಕಾರ್ಯ ವೇದಿಕೆಯ ಅಧ್ಯಕ್ಷ ರಾಜೇಶ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಅಭ್ಯುದಯ ಸಮಾಜಕಾರ್ಯ ವೇದಿಕೆಯ ಸಂಯೋಜಕಿ ಸುಷ್ಮಾ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವಿತೀಯ ಎಂಎಸ್​ಡಬ್ಲ್ಯೂ ವಿದ್ಯಾರ್ಥಿಗಳಾದ ಪ್ರವಿತ್ರಾ ಸ್ವಾಗತಿಸಿದರು. ಶಾನ್​ ಪೀಟರ್​ ವಂದಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.