ಪಚ್ಚನಾಡಿಯ ಆಶ್ರಯ ಮಿತ್ರವೃಂದ ರಂಗಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ, ಬಿ.ಸಿ.ಟ್ರಸ್ಟ್‌ನ ಯೋಜನಾಧಿಕಾರಿ ಗಿರೀಶ್ ಕುಮಾರ್, ಯೇನೆಪೋಯ ಡೆಂಟಲ್ ಕಾಲೇಜಿನ ಸರ್ಜನ್ ಡಾ.ಸುಭಾಷ್ ರೈ, ಮಾಜಿ ಕಾರ್ಪೊರೇಟರ್ ಸಂಗೀತಾ ಆರ್.ನಾಯಕ್ ಮೊದಲಾದವರಿದ್ದರು.
ಗುರುಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ, ಬಿ.ಸಿ.ಟ್ರಸ್ಟ್‌ನ ಯೋಜನಾಧಿಕಾರಿ ಗಿರೀಶ್ ಕುಮಾರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಬಜ್ಪೆ, ಶ್ರೀ ಕಟೀಲೇಶ್ವರಿ ಜ್ಞಾನವಿಕಾಸ ಕೇಂದ್ರ ಪಚ್ಚನಾಡಿ ಮತ್ತು ಆಶ್ರಯನಗರ ಆಶ್ರಯ ಮಿತ್ರವೃಂದ ಸಾರಥ್ಯದಲ್ಲಿ ಯೇನೆಪೋಯ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಹಿಂದೂ ಕುಷ್ಠರೋಗ ನಿವಾರಣಾ ಸಂಘ ಮಂಗಳೂರು, ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಪಚ್ಚನಾಡಿಯ ಆಶ್ರಯ ಮಿತ್ರವೃಂದ ರಂಗಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಿತ್ರವೃಂದದ ಗೌರವಾಧ್ಯಕ್ಷ ಲಿಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಯೇನೆಪೋಯ ಡೆಂಟಲ್ ಕಾಲೇಜಿನ ಸರ್ಜನ್ ಡಾ.ಸುಭಾಷ್ ರೈ, ಮಾಜಿ ಕಾರ್ಪೊರೇಟರ್ ಸಂಗೀತಾ ಆರ್.ನಾಯಕ್, ಯೇನೆಪೋಯ ಆಯುರ್ವೇದ ದೇರಳಕಟ್ಟೆಯ ಸಮುದಾಯ ದಂತ ವಿಭಾಗದ ಡಾ.ಸುಪ್ರಿಯಾ, ಸಂಯೋಜನಾಧಿಕಾರಿ ಭರತ್, ಕ್ಯಾಂಪ್ಕೋ-ಆರ್ಡಿನೇಟರ್ ರಜಾಕ್, ಒಕ್ಕೂಟ ಅಧ್ಯಕ್ಷೆ ಸುಷ್ಮಾ ಶೆಟ್ಟಿಗಾರ, ವಲಯ ಮೇಲ್ವಿಚಾರಕಿ ಸುಜಾತಾ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪ್ರಮೀಳಾ, ಸೇವಾ ಪ್ರತಿನಿಧಿ ಸೆಲ್ವಕುಮಾರ್, ಮಿತ್ರವೃಂದ ಸದಸ್ಯರು, ಒಕ್ಕೂಟ ಪದಾಧಿಕಾರಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪ್ರಮೀಳಾ ನಿರೂಪಿಸಿದರು. ಸೆಲ್ವಕುಮಾರ್ ವಂದಿಸಿದರು.