ಟೈಲರ್ಸ್ ಡೇ ಆಚರಣೆ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿದರು. ಪಿ.ಬಿ.ಸುಧಾಕರ ರೈ, ರವೀಂದ್ರ ಡಿ. ಇತರರು ಇದ್ದರು.
ಸುಳ್ಯ: ಟೈಲರ್‌ಗಳು ಸ್ವಾವಲಂಬಿ ಬದುಕು ನಡೆಸುತ್ತಿದ್ದು, ಟೈಲರಿಂಗ್ ವೃತ್ತಿ ಲಕ್ಷಾಂತರ ಮಂದಿಗೆ ಅನ್ನ ನೀಡಿದೆ. ಅವರ ಸಂಘಟನೆ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನಾರ್ಹ ಎಂದು ಶಾಸಕಿ ಭಾಗೀರಥಿ ಮುರುಳ್ಯ ಶ್ಲಾಘಿಸಿದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ಸ್, ಸುಳ್ಯ ಕ್ಷೇತ್ರ ಸಮಿತಿ ಮತ್ತು ಸಮಿತಿಯ ಆರು ವಲಯಗಳ ವತಿಯಿಂದ ನಡೆದ ಟೈಲರ್ಸ್ ಡೇ ಆಚರಣೆ, ದೇರಳಕಟ್ಟೆಯ ಯೇನೆಪೋಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸಹಯೋಗದಲ್ಲಿ ನೇತ್ರ ಉಚಿತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ, ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಆರು ವಲಯದ ಫಲಾನುಭವಿಗಳಿಗೆ ತಲಾ ಒಂದೊಂದು ಹೊಲಿಗೆ ಯಂತ್ರವನ್ನು ಶಾಸಕಿ ಭಾಗೀರಥಿ ಹಸ್ತಾಂತರಿಸಿದರು. ಉದ್ಯಮಿ ಪಿ.ಬಿ.ಸುಧಾಕರ ರೈ ಉದ್ಘಾಟಿಸಿದರು.
ಸುಳ್ಯ ಕೆಎಸ್‌ಟಿಎ ಅಧ್ಯಕ್ಷ ರವೀಂದ್ರ ಡಿ.ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ ಕೆ.ಎಂ., ದೃಷ್ಟಿ ಚಾರಿಟೆಬಲ್‌ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಭಟ್ ಕೊಡೆಂಕಿರಿ, ಯೆನೆಪೋಯ ಸಂಸ್ಥೆಯ ಅಬ್ದುಲ್ ರಝಾಕ್, ಪ್ರಮುಖರಾದ ಜಯಂತ್ ಉಲಾರ್ಂಡಿ, ವಿಜಯಕುಮಾರ್ ರೈ, ರಮೇಶ್ ತೊಡಿಕಾನ, ಕೊಡಗು ಜಿಲ್ಲಾಧ್ಯಕ್ಷ ಶೇಖ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. ವಿಜಯಕುಮಾರ್ ರೈ ಸ್ವಾಗತಿಸಿದರು. ಕುಸುಮಾಧರ ರೈ ಬೂಡು ನಿರೂಪಿಸಿದರು.