ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜು, ಕೆ.ಎಸ್.ಎಸ್. ಕಾಲೇಜು, ಕುಮಾರಸ್ವಾಮಿ ವಿದ್ಯಾಲಯ ಸೇರಿದಂತೆ ಸುಬ್ರಹ್ಮಣ್ಯದ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು, ವಸತಿ ಶಾಲೆ, ಕಡಬ ತಹಸೀಲ್ದಾರ್ ಕಚೇರಿ, ಕಡಬ ತಾಪಂ, ಸುಳ್ಯ ತಹಸೀಲ್ದಾರ್ ಕಚೇರಿ, ಪಟ್ಟಣ ಪಂಚಾಯಿತಿ, ಯೇನೆಕಲ್ಲು ಸಹಕಾರಿ ಸಂಘ, ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಪುತ್ತೂರು ಪೊಲೀಸ್ ಠಾಣೆ, ಬಿಳಿನೆಲೆ, ಕಲ್ಮಡ್ಕ, ಮುರುಳ್ಯ, ಕುಟ್ರುಪ್ಪಾಡಿ, ಬಲ್ಯ, ಬೆಳಂದೂರು, ಬಳ್ಪ ಪೆರುವಾಜೆ, ಅಜ್ಜಾವರ, ಸುಬ್ರಹ್ಮಣ್ಯ ಮೊದಲಾದ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಲಾಡು ವಿತರಿಸಲಾಗಿದೆ. ಸುಳ್ಯ, ಕಡಬ, ಪುತ್ತೂರು ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜುಗಳಿಗೆ ಲಾಡು ವಿತರಣೆಯಾಗಿದೆ.
ಸ್ವಾತಂತ್ರೋತ್ಸವ ಆಚರಣೆಗಾಗಿ ಕುಕ್ಕೆ ದೇವಳದಿಂದ ಈ ಬಾರಿ 60 ಸಾವಿರ ಲಡ್ಡು ವಿತರಿಸಲಾಗಿದೆ. ಸುಳ್ಯ, ಪುತ್ತೂರು, ಕಡಬ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಶಾಲೆಗಳ ಕೋರಿಕೆ ಮೇರೆಗೆ ದೇವಳದಿಂದ ಲಡ್ಡು ನೀಡಲಾಗಿದೆ. ಸಂಸ್ಥೆಗಳು ನೀಡಿದ ಬೇಡಿಕೆಗೆ ಅನುಗುಣವಾಗಿ ಲಡ್ಡು ತಯಾರಿಸಲಾಗಿದೆ.
— ಹರೀಶ್.ಎಸ್.ಇಂಜಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ದೇವಳಕ್ಕೆ ಶನಿವಾರ ಆಗಮಿಸುವ ಭಕ್ತರಿಗೆ ಲಡ್ಡು ವಿತರಣೆ ಮಾಡಲಾಗುವುದು. ದೇವಳದಲ್ಲಿ ನೀಡುವ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ಪ್ರಸಾದದಲ್ಲಿ ಲಡ್ಡು ಪ್ರಸಾದ ನೀಡಲಾಗುವುದು. ವ್ಯವಸ್ಥಿತವಾಗಿ ವಿಶೇಷ ರೀತಿಯಲ್ಲಿ ಬಾಣಸಿಗರು ತಯಾರಿಸಿದ್ದಾರೆ.
— ಅರವಿಂದ ಅಯ್ಯಪ್ಪ ಸುತಗುಂಡಿ. ಕಾರ್ಯನಿರ್ವಹಣಾಧಿಕಾರಿ