ಮೊಹಮ್ಮದ್ ಶಾಖಿರ್ 
ಉಡುಪಿ

ಬ್ಯಾಂಕ್‌ನಲ್ಲಿ ಕಳವಿಗೆ ಯತ್ನಿಸಿದ ಆರೋಪಿ ಸೆರೆ

ಇಂದಿರಾ ಎನ್ ಕೆ
ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪೈಕಿ ಬಂಟ್ವಾಳ ಮಾರಿಪಳ್ಳ ನಿವಾಸಿ ಮೊಹಮ್ಮದ್ ಶಾಖಿರ್(33) ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಜು.12ರಂದು ಫರಂಗಿಪೇಟೆಯ ಮಿನೇಜಸ್ ಪ್ಲಾಝಾ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್ ಶಾಖೆಗೆ ಮೇಲ್ಛಾವಣಿ ಕೊರೆದು ಒಳಪ್ರವೇಶಿಸಿ ಕಳವಿಗೆ ಯತ್ನಿಸಿ ಬರಿಗೈಯಲ್ಲಿ ವಾಪಸ್ಸಾಗಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪೈಕಿ ಮೊಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದು, ಉಳಿದವರ ಬಂಧನಕ್ಕೆ ತನಿಖೆ ಮುಂದುವರಿಸಿದ್ದಾರೆ.