ಉಡುಪಿ: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಕಾಯಿಲೆಯು ಆ ಕುಟುಂಬದ ಮೇಲೆ ಅಪಾರ ಭಾವನಾತ್ಮಕ ಹಾಗೂ ಆರ್ಥಿಕ ಹೊರೆ ಉಂಟುಮಾಡುತ್ತದೆ. ಆದರೆ, ಸಕಾಲದಲ್ಲಿ ದೊರೆಯುವ ಚಿಕಿತ್ಸೆಯು ಆ ಮಗುವಿನ ಬದುಕಿನಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ಕ್ಯಾನ್ಸರ್ಗೆ ತುತ್ತಾದ ಪುಟ್ಟ ಬಾಲಕರ ಚಿಕಿತ್ಸೆಗೆಂದು ತಮ್ಮ ಕಲೆಯ ಮೂಲಕ ಸಂಗ್ರಹಿಸಿದ ಹಣವನ್ನು ನೆರವಿನ ರೂಪದಲ್ಲಿ ನೀಡಿದ ದರ್ಪಣ ಮಹಿಳಾ ಪಿಲಿ ತಂಡದ ಕಾರ್ಯ ಶ್ರೇಷ್ಠವಾದದ್ದು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ದಾಖಲಾಗಿರುವ ಬಾಲ ಕ್ಯಾನ್ಸರ್ಗೆ ತುತ್ತಾದ ಮಕ್ಕಳ ಚಿಕಿತ್ಸೆಗಾಗಿ ದರ್ಪಣ ಮಹಿಳಾ ಪಿಲಿ ತಂಡ ನೀಡಿದ 1.50 ಲಕ್ಷ ರೂ. ರೂ. ನೆರವು ಹಸ್ತಾಂತರಿಸಿ ಮಾತನಾಡಿದರು.
ಮಕ್ಕಳು ಬೇಗ ವಾಸಿಯಾಗಲಿ
ದರ್ಪಣ ಮಹಿಳಾ ಪಿಲಿ ತಂಡದ ತರಬೇತುದಾರೆ ರಾ ಮಾತನಾಡಿ, ಮಕ್ಕಳು, ಪಾಲಕರು, ಹಿತೈಷಿಗಳು ಹಾಗೂ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರದಿಂದ ಈ ನೆರವು ನೀಡಲು ಸಾಧ್ಯವಾಯಿತು. ಮುಂದೆಯೂ ಸಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೇವೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಶೀಘ್ರವಾಗಿ ಚೇತರಿಸಿಕೊಳ್ಳಲು ಎಂದರು.
ಕಸ್ತೂರ್ಬಾ ಆಸ್ಪತ್ರೆಯ ಎಸಿ ವಿಭಾಗದ ಸಿಬ್ಬಂದಿಯೂ ಸಹ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವಿಭಿನ್ನ ವೇಷ ಧರಿಸಿ ಸಂಗ್ರಹಿಸಿದ್ದ 70 ಸಾವಿರ ರೂ.ವನ್ನೂ ಸಹ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವಿಭಾಗಕ್ಕೆ ಹಸ್ತಾಂತರಿಸಲಾಯಿತು.
ಎಸಿ ವಿಭಾಗದ ಮ್ಯಾನೇಜರ್ ದಿನೇಶ್, ಸಿಬ್ಬಂದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ದಾನಿಗಳ ನೆರವು ಹಾಗೂ ಇಂತಹ ಚಟುವಟಿಕೆಗಳ ಮೂಲಕ ಎಸಿ ವಿಭಾಗವು ಇದುವರೆಗೆ ನೀಡಿದ ಸೇವಾ ನೆರವಿನ ಮೊತ್ತ 40.7 ಲಕ್ಷ ರೂ. ದಾಟಿದೆ. ಆರ್ಥಿಕ ಸಂಕಷ್ಟದ ಕಾರಣದಿಂದ ಯಾವುದೇ ಮಗುವೂ ಸಹ ಕ್ಯಾನ್ಸರ್ ಚಿಕಿತ್ಸೆಯಿಂದ ವಂಚಿತವಾಗದಂತೆ ನೋಡಿಕೊಳ್ಳುವ ನಮ್ಮ ಪ್ರಯತ್ನಕ್ಕೆ ಇಂತಹ ನೆರವು ಬಲ ನೀಡುತ್ತದೆ.> ಡಾ. ಅವಿನಾಶ್ ಶೆಟ್ಟಿ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ.