ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಮಧ್ವ ಸರೋವರದ ಬಳಿ ಸರದಿ ಸಾಲಿನಲ್ಲಿ ನಿಂತಿರುವ ಪ್ರವಾಸಿ ಭಕ್ತರು.
* ಬೀಚ್, ದೇಗುಲಗಳಲ್ಲಿ ಜನಜಂಗುಳಿ
ಉಡುಪಿ: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜಾ ಹಿನ್ನೆಲೆಯಲ್ಲಿ ಹಾಗೂ ವೀಕೆಂಡ್ ರಜಾ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ಪ್ರವಾಸಿಗರು, ಯಾತ್ರಿಗಳ ದಂಡು ದೌಡಾಯಿಸುತ್ತಿವೆ.
ವಿಪರೀತ ಸೆಕೆಯ ನಡುವೆಯೂ ರಾಜ್ಯ ಹಾಗೂ ಅನ್ಯ ರಾಜ್ಯಗಳ ಪ್ರವಾಸಿಗರು ಉಡುಪಿ ಹಾಗೂ ದಣ ಕನ್ನಡ ಜಿಲ್ಲೆಗಳ ದೇವಾಲಯ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
ಬೆಂಗಳೂರು, ಮೈಸೂರು, ಪಕ್ಕದ ಉತ್ತರ ಕನ್ನಡ ಜಿಲ್ಲೆ ಹಾಗೂ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಭಾಗದಿಂದಲೂ ಕುಟುಂಬ ಸಮೇತರಾಗಿ ಕಾರುಗಳ ಮೂಲಕ ಉಡುಪಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಎಲ್ಲೆಡೆ ವಾಹನ ದಟ್ಟಣೆ
ಉಡುಪಿ ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಶ್ರೀಕೃಷ್ಣ ಮಠ ಸಂಪರ್ಕದ ಕಲ್ಸಂಕ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ರಾಜಾಂಗಣ ಸಮೀಪದ ಪಾರ್ಕಿಂಗ್ ಪ್ರದೇಶದಲ್ಲಿ ಶನಿವಾರ (ಮೇ 2) ಸಂಜೆ ಪ್ರವಾಸಿ ವಾಹನ ನಿಲ್ಲಿಸಲು ಆಗದಷ್ಟು ಒತ್ತಡ ಹೆಚ್ಚಿತ್ತು. ಹೀಗಾಗಿ ರಸ್ತೆಗಳ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿ, ಸುಗಮ ಸಂಚಾರಕ್ಕೆ ತೊಡಕಾಗುತ್ತಲೇ ಇತ್ತು.
ಬೀಚ್ಗಳಲ್ಲಿ ಕಲರವ
ಕೊಲ್ಲೂರು ಮೂಕಾಂಬಿಕಾ ದೇಗುಲ, ಶ್ರೀಕೃಷ್ಣ ಮಠ ಸೇರಿದಂತೆ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಉಡುಪಿಯ ಮಲ್ಪೆ ಬೀಚ್, ಕಾಪು ಬೀಚ್, ತ್ರಾಸಿ ಬೀಚ್ಗಳಲ್ಲಿ ಪ್ರವಾಸಿಗರ ಕಲರವ ಕಂಡುಬರುತ್ತಿದೆ. ಬೀಚ್ಗಳಲ್ಲಿರುವ ಜಲಕ್ರೀಡೆಗಳಾದ ಬನಾನಾ ರೈಡ್, ಸ್ಪೀಡ್ ಬೋಟ್ ಇನ್ನಿತರ ಜಲಸಾಹಸಿ ಆಟಗಳ ಮೂಲಕ ಮೋಜು-ಮಸ್ತಿಯಲ್ಲಿ ಖಷಿ ಅನುಭವಿಸುತ್ತಿದ್ದಾರೆ.