ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು. 
ಉಡುಪಿ

ಆ.12ರಿಂದ ಸುಗುಣೇಂದ್ರ ಶೀಗಳ 53ನೇ ಚಾತುರ್ಮಾಸ್ಯ

* ನವಿಮುಂಬಯಿಯ ಪುತ್ತಿಗೆ ಶಾಖಾ ಮಠದಲ್ಲಿ ಆಚರಣೆ

ಉಡುಪಿ: ಯತಿಕುಲ ಚಕ್ರವರ್ತಿ ಬಿರುದಾಂಕಿತ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆ.12ರಿಂದ ತಮ್ಮ 53ನೇ ಚಾತುರ್ಮಾಸ್ಯ ವ್ರತ ಆರಂಭಿಸಲಿದ್ದಾರೆ. ಈ ಬಾರಿ ನವಿಮುಂಬಯಿಯ ವಾಶಿಯಲ್ಲಿರುವ ಪುತ್ತಿಗೆ ಶಾಖಾ ಮಠದಲ್ಲಿ ಆಚರಣೆ ಕೈಗೊಳ್ಳಲಿದ್ದಾರೆ.
ಆ.11ರಂದು ಮುಂಬಯಿಯಲ್ಲಿರುವ ಪುತ್ತಿಗೆ ಮಠದ ಭಕ್ತರು ಹಾಗೂ ಶಿಷ್ಯರು ವೈಭವದಿಂದ ಶ್ರೀಗಳ ಪುರಪ್ರವೇಶ ಮೆರವಣಿಗೆ ನಡೆಸಲಿದ್ದಾರೆ. ಸೆ.26ರಂದು ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ. ಈ ಹಿಂದೆ ಶ್ರೀಗಳು ಮುಂಬಯಿಯಲ್ಲಿ 7 ಚಾತುರ್ಮಾಸ್ಯ ಕೈಗೊಂಡಿದ್ದು, ಇದು 8ನೇ ಆಚರಣೆಯಾಗಿದೆ.
ಆ.12ರಿಂದ ವಿವಿಧ ಧಾರ್ಮಿಕ ಅನುಷ್ಠಾನ, ಭಜನೆ, ಪ್ರವಚನ ಹಾಗೂ ಸಾಂಸತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಮಠದ ದಿವಾನ ನಾಗರಾಜ್​ ಆಚಾರ್ಯ ತಿಳಿಸಿದ್ದಾರೆ.
"

ಉಡುಪಿ ಹಿರಿಯಡ್ಕ ಸಮೀಪದ ಪುತ್ತಿಗೆಯಲ್ಲಿರುವ ಮೂಲ ಮಠದಲ್ಲಿ ಸುಗುಣೇಂದ್ರ ಶ್ರೀಗಳು ಆ.10ರಂದು ಬೆಳಗ್ಗೆ ತಮ್ಮ ಗುರುಗಳಿಗೆ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಸಾಯಂಕಾಲ ಮುಂಬಯಿ ತಲುಪಿ ಪುರಪ್ರವೇಶ ಮಾಡಲಿದ್ದಾರೆ. ವ್ರತ ಸಾಂಗವಾಗಿ ನೆರವೇರಲು ಚಾತುರ್ಮಾಸ್ಯ ಸಮಿತಿ ನೇಮಿಸಲಾಗಿದೆ. ಆ.15ರಂದು ನವಿಮುಂಬಯಿಯಲ್ಲಿರುವ ಪುತ್ತಿಗೆ ಶಾಖಾ ಮಠದ ಉದ್ಘಾಟನೆ ನೆರವೇರಲಿದೆ.

— ಪ್ರಸನ್ನ ಆಚಾರ್ಯ. ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ.