ಒರಿಸ್ಸಾದ ಭುವನೇಶ್ವರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬ್ರಾಹ್ಮಣ ಸಮ್ಮೇಳನ ಉದ್ಘಾಟಿಸಿದ ಸುಗುಣೇಂದ್ರ ಶ್ರೀಗಳು ಬ್ರಾಹ್ಮಣ ಭವನದ ನಿರ್ಮಾಣಕ್ಕೆ ಸಂಘಟನೆಯ ಅಧ್ಯಕ್ಷ ಪ್ರೊ.ಸದಾನಂದ ದೀಕ್ಷಿತ ಅವರಿಗೆ ವಿಶೇಷ ಅನುದಾನ ನೀಡಿದರು. 
ಉಡುಪಿ

ರಾಷ್ಟ್ರಕ್ಕೆ ಬ್ರಾಹ್ಮಣರ ಕೊಡುಗೆ ಅಪಾರ

* ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

* ಒರಿಸ್ಸಾದಲ್ಲಿ ರಾಷ್ಟ್ರೀಯ ಮಹಾ ಸಮ್ಮೇಳನ ಉದ್ಘಾಟನೆ

ಉಡುಪಿ: ಬ್ರಾಹ್ಮಣರು ನಿಸ್ವಾರ್ಥವಾಗಿ ನಿತ್ಯವೂ ವಿಶ್ವದ ಶಾಂತಿ, ನೆಮ್ಮದಿ ಬಯಸುವವರಾಗಿದ್ದಾರೆ. ತಮ್ಮ ಪ್ರತಿಯೊಂದು ವೈದಿಕ ಕಾರ್ಯದಲ್ಲೂ ಸಹ ಸಮಸ್ತ ಲೋಕವೂ ಸದಾ ಸುಖವಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ಶಿಕ್ಷಣ, ರಾಷ್ಟ್ರ ರಕ್ಷಣೆಯೂ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಒರಿಸ್ಸಾದ ಭುವನೇಶ್ವರದಲ್ಲಿ ಒರಿಸ್ಸಾ ಬ್ರಾಹ್ಮಣ ಮಹಾಸಂಘದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಬ್ರಾಹ್ಮಣ ಮಹಾ ಸಮ್ಮೇಳನ ಉದ್ಘಾಟಿಸಿ, ನಶಿಸುತ್ತಿರುವ ಸಂಸ್ಕಾರಗಳ ಸಂರಕ್ಷಣೆಯ ಕುರಿತಾಗಿ ವಿಶೇಷ ಆಶೀರ್ವಚನ ಹಾಗೂ ಉಪದೇಶ ನೀಡಿದರು. 
ಓರಿಸ್ಸಾದ ಬ್ರಾಹ್ಮಣ ಮಹಾಸಂದ ಅಧ್ಯಕ್ಷ ಪ್ರೊ.ಸದಾನಂದ ದೀಕ್ಷಿತ ನೇತೃತ್ವದಲ್ಲಿ ಆಯ್ಕೆಯಾದ ಒರಿಸ್ಸಾ ಬ್ರಾಹ್ಮಣ ಮಹಾ ಸಂಘದ ನೂತನ ಪದಾಧಿಕಾರಿಗಳಿಗೆ ಶ್ರೀಗಳು ಬೋಧನೆ ಮಾಡಿದರು. ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಬ್ರಾಹ್ಮಣ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು.
ಬ್ರಾಹ್ಮಣ ಭವನದ ನಿರ್ಮಾಣಕ್ಕೆ ಶ್ರೀಗಳು ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿದರು. ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ ಉಪಸ್ಥಿತರಿದ್ದರು.
"

ಇಂದಿನ ಕಾಲಘಟ್ಟದಲ್ಲಿ ಬ್ರಾಹ್ಮಣರು ತಮ್ಮ ಸಂಸ್ಕಾರ ರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸಲೇಬೇಕಿದೆ. ಇಲ್ಲದಿದ್ದಲ್ಲಿ ಸನಾತನ ಹಿಂದೂ ಧರ್ಮ ರಕ್ಷಣೆಗೆ ತೊಡಕಾಗಲಿದೆ. ಗಾಯತ್ರಿ, ಗೀತಾ, ವೇದಾಧ್ಯಯನವನ್ನು ತಪ್ಪದೇ ಮಾಡಬೇಕು. ಇದುವೇ ಬ್ರಾಹ್ಮಣರ ಶಕ್ತಿಯಾಗಿದೆ.