ಕುಂದಾಪುರ ಹೋಲಿ ರೋಜರಿ ವಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವನ್ನು ಆಚರಿಸಲಾಯಿತು.
ಕುಂದಾಪುರ: ಈ ಪ್ರಪಂಚದಲ್ಲಿ ಯಾರ ಮೇಲೂ ಭರವಸೆ ಇಡಲು ಸಾಧ್ಯವಿಲ್ಲ. ಮನುಷ್ಯ ಸಂಬಂಧದ ಮೇಲೆ, ಪ್ರಪಂಚದ ವಸ್ತುಗಳ ಮೇಲೆ ಭರವಸೆ ಇಡಲು ಸಾಧ್ಯವಿಲ್ಲ, ಎಲ್ಲವೂ ಕೆಟ್ಟು ಹೋಗುತ್ತೆ. ಆದರೆ ದೇವರ ವಾತೆ, ರೋಜರಿ ವಾತೆಯ ಮೇಲೆ ಭರವಸೆ ಇಟ್ಟು ನಮ್ಮ ಜೀವನದ ಪಯಣ ವಾಡಿದರೆ ಯಶಸ್ಸು ಲಭಿಸುತ್ತದೆ ಎಂದು ಶಿವಮೊಗ್ಗ ಧರ್ಮಪ್ರಾಂತ್ಯದ ಕಬಳೆ ಸಂತ ಫ್ರಾನ್ಸಿಸ್ ಸಾವೆರ್ ಚರ್ಚಿನ ಧರ್ಮಗುರು ರೋಮನ್ ಪಿಂಟೊ ಹೇಳಿದರು.
ಕುಂದಾಪುರ ಹೋಲಿ ರೋಜರಿ ವಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬ ಆಚರಿಸಿ ಮಾತನಾಡಿದರು. ಉಡುಪಿ ಧರ್ಮಪ್ರಾಂತ್ಯದ ಮೊನ್ಸಿಂರ್ಹೊರ್ ಫರ್ಡಿನಾಂಡ್ ಗೊನ್ಸಾಲಿಸ್ ಮತ್ತು ಕುಂದಾಪುರ ಚರ್ಚ್‌ನ ಧರ್ಮಗುರು ಪಾವ್ಲ್ ರೇಗೊ ಬಲಿಪೂಜೆಯಲ್ಲಿ ಭಾಗವಹಿಸಿದರು.
ಗಂಗೊಳ್ಳಿ ಚರ್ಚ್‌ನ ಧರ್ಮಗುರು ಥೋಮಸ್ ರೋಶನ್ ಡಿಸೋಜ, ಕುಂದಾಪುರ ವಲಯದ ಧರ್ಮಕೇಂದ್ರಗಳ ಅನೇಕ ಧರ್ಮಗುರುಗಳು, ಕಟ್ಕೆರೆ ಕಾರ್ಮೆಲ್ ಸಂಸ್ಥೆ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಂತ ಜೋಸೆಫ್ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಮತ್ತು ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇವಾ ಡಿಕುನ್ಹಾ, ಗುರಿಕಾರರು, ಪಾಲನ ಮಂಡಳಿ ಸದಸ್ಯರು ವಾರ್ಷಿಕ ಜಾತ್ರೆಯ ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು.