ಅಮಾಸೆಬೈಲು ಸಮೀಪದ ಕಡವಾಸೆ ಶ್ರೀಕುಮಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶಾಕಲ ಋಕ್ಸಂಹಿತಾ ಯಾಗದ ಪೂರ್ಣಾಹುತಿ ಧಾರ್ಮಿಕ ಕಾರ್ಯ ನಡೆಯಿತು. ್ಲ ಶೃಂಗೇರಿ ಶ್ರೀವಿಧುಶೇಖರ ಮಹಾಸ್ವಾಮಿ, ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ, ಶಾಸಕ ಚನ್ನಬಸಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಈಶ್ವರಪ್ಪ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಅಮಾಸೆಬೈಲು
ಧರ್ಮ-ಅಧರ್ಮಗಳಿಗೆ ಆಧುನಿಕ, ಪ್ರಾಚೀನ ಕಾಲ ಎನ್ನುವುದು ಇಲ್ಲ. ಎಲ್ಲ ಕಾಲಗಳಲ್ಲಿ ಧರ್ಮ-ಅಧರ್ಮ ಇರುತ್ತವೆ. ಇದು ನಾವು ಮಾಡುವ ಕಾರ್ಯದಿಂದ ನಿರ್ಣಯವಾಗುತ್ತದೆ. ನಾವು ಉತ್ತಮ ಸಂದೇಶ ತಿಳಿದು ಬಾಳಬೇಕು. ವೇದ ಶಾಸ್ತ್ರಗಳು ತೋರುವ ಮಾರ್ಗದಲ್ಲಿ ನಡೆದಾಗ ಶ್ರೇಯಸ್ಸು ದೊರೆಯುತ್ತದೆ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮಿ ಆಶೀರ್ವದಿಸಿದರು.
ಅಮಾಸೆಬೈಲು ಸಮೀಪದ ಕಡವಾಸೆ ಶ್ರೀಕುಮಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜ.1ರಿಂದ ಜ.8ರ ತನಕ ನಡೆದ ಶ್ರೀ ಶಾಕಲ ಋಕ್ಸಂಹಿತಾ ಯಾಗದ ಪೂರ್ಣಾಹುತಿ ಧಾರ್ಮಿಕ ಕಾರ್ಯದಲ್ಲಿ ಆಶೀರ್ವದಿಸಿದರು.
ಸುಖ-ದುಃಖ ಧಾರ್ಮಿಕತೆಯಿಂದ ಬರುವಂತದಲ್ಲ. ಧರ್ಮ ಹಾಗೂ ಅರ್ಧಮಗಳಿಂದ ಬರುವಂತಾದ್ದಾಗಿದೆ. ಇದು ಭೋಗ ರೂಪದ ವಸ್ತುಗಳಿಂದ ಬರುತ್ತದೆ. ಯೋಗ ಎಂದರೆ ಧರ್ಮ. ದುಖಃ ಅಂದರೆ ಅಧರ್ಮ. ಶ್ರೀ ಶಾಕಲ ಋಕ್ಸಂಹಿತಾ ಯಾಗ ವಿಶಿಷ್ಟ ವೇದ ಕಾರ್ಯಗಳಿಂದ ನಡೆಯುವ ಧಾರ್ಮಿಕ ಕಾರ್ಯ ಎಂದರು.
ಕುಂದಾಪುರ ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ, ಶಿವಮೊಗ್ಗ ನಗರದ ಶಾಸಕ ಚನ್ನಬಸಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಈಶ್ವರಪ್ಪ, ಆರ್‌ಎಸ್‌ಎಸ್ ಪ್ರಚಾರಕರಾದ ಸೀತಾರಾಮ ಕೆದ್ಲಾಯ, ದಾ.ಮ ರವೀಂದ್ರ, ಶಿವಮೊಗ್ಗ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಉದ್ಯಮಿ ಸುರೇಶ್ ಕುಮಾರ್ ಶಿವಮೊಗ್ಗ, ಶಿವಮೊಗ್ಗ ನಗದ ಶಂಕರ ಮಠ ಅಧ್ಯಕ್ಷ ಡಾ.ಪಿ.ನಾರಾಯಣ ರಾವ್, ಶೃಂಗೇರಿ ಪ್ರಾಂತೀಯ ಅಧ್ಯಕ್ಷ ಲೋಕೇಶ ಅಡಿಗ ಕುಂದಾಪುರ, ಶ್ರೀಕುಮಾರ ಸುಬ್ರಹ್ಮಣ್ಯ ದೇವಸ್ಥಾನದ ತಂತ್ರಿ ಕೋಟ ಬಲರಾಮ ಸೋಮಯಾಜಿ, ಪುರೋಹಿತರಾದ ಶ್ರೀನಿವಾಸ ಅಡಿಗ ತೊಂಬತ್ತು, ಅರ್ಚಕ ಕೃಷ್ಣ ಕುಮಾರ ಭಾಗವತ ಮತ್ತಿತರರು ಉಪಸ್ಥಿತರಿದ್ದರು.
ಕೆ.ಸಿ.ನಟರಾಜ ಭಾಗವತ ಶಿವಮೊಗ್ಗ ಸ್ವಾಗತಿಸಿದರು. ಶೃಂಗೇರಿ ಶ್ರೀ ಶಾರದಾ ಪೀಠದ ಆಸ್ಥಾನ ವಿದ್ವಾಂಸ ವಾಸುದೇವ ಜೋಯಿಸ ತಟ್ಟುವಟ್ಟು ಕಾರ್ಯಕ್ರಮ ನಿರೂಪಿಸಿದರು. ವಸುಧಾ ವಂದಿಸಿದರು.
ಲೋಕ ಕಲ್ಯಾಣಾರ್ಥ ಯಾಗ
ಕಡವಾಸೆ ಶ್ರೀ ಕುಮಾರ ಸುಬ್ರಹ್ಮಣ್ಯ ದೇವಸ್ಥಾನ ಪ್ರತಿಷ್ಠಾನ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ ಶಿವಮೊಗ್ಗ ನೇತೃತ್ವದಲ್ಲಿ ಕಡವಾಸೆ ಶ್ರೀ ಕುಮಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜ.1ರಿಂದ 8ವರೆಗೆ ಲಕ್ಷ್ಮೀನಾರಾಯಣ ಅಡಿಗ ಗುಡ್ಡಟ್ಟು ಪೌರೋಹಿತ್ಯದಲ್ಲಿ ಶ್ರೀ ಶಾಕಲ ಋಕ್ಸಂಹಿತಾ ಯಾಗ ಜರುಗಿತು.