ಬೆಪ್ಡೆ ಶ್ರೀರಾಮ ಬಾಲಗೋಕುಲದ ಬಾಲ ಸಂಗಮ-&2026 ಕಾರ್ಯಕ್ರಮವನ್ನು ಉದ್ಯಮಿ ಸಂಪತ್​ ಶೆಟ್ಟಿ ಎಸ್​. ಶನಿವಾರ ಉದ್ಘಾಟಿಸಿ ಮಾತನಾಡಿದರು. ಪ್ರಮುಖರಾದ ಉಷಾ ಪ್ರಕಾಶ್​ ಶೆಟ್ಟಿ, ಎನ್​.ಆರ್​.ದಾಮೋದರ ಶಮಾರ್ ಬಾರ್ಕೂರು, ರಮೀತಾ ಸೂರ್ಯವಂಶಿ ಕಾರ್ಕಳ ಮತ್ತಿತರರಿದ್ದರು. 
ಉಡುಪಿ

ಸಂಸ್ಕಾರಗಳ ಅರಿವಿನಿಂದ ಜೀವನದಲ್ಲಿ ಯಶಸ್ಸು

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿ ಸಂಪತ್​ ಶೆಟ್ಟಿ ಎಸ್​. ಹೇಳಿಕೆ
  • ಬಾಲ ಸಂಗಮ- ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಆರ್ಡಿ
ಮಕ್ಕಳಿಗೆ ಬಾಲ್ಯದ ದಿನಗಳಲ್ಲಿ ಶ್ರೇಷ್ಠ ಸಂಸ್ಕಾರಗಳ ಅರಿವು ಮೂಡಿಸಿದಾಗ ಜೀವನದಲ್ಲಿ ಆದರ್ಶ ಸದ್ಗುಣಗಳನ್ನು ಮೈಗೂಡಿಸಿಕೊಂಡು ಯಶಸ್ಸು ಗಳಿಸಲು ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಬಾಲಗೋಕುಲ ಕೇಂದ್ರಗಳ ಕಾರ್ಯ ಪ್ರಶಂಸನೀಯ ಎಂದು ಉದ್ಯಮಿ ಸಂಪತ್​ ಶೆಟ್ಟಿ ಎಸ್​. ಹೇಳಿದರು.

ಸಂಗಮ- ಕಾರ್ಯಕ್ರಮ ಉದ್ಘಾಟನೆ:

ಕುದ್ರುಬಿಡು- ಕೊಳ್ಕೆಬೈಲು ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಹೆಬ್ರಿ ಗ್ರಾಮ ವಿಕಾಸ, ಬೆಪ್ಡೆ ಶ್ರೀರಾಮ ಬಾಲಗೋಕುಲದ ಬಾಲ ಸಂಗಮ- ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಉಷಾ ಪ್ರಕಾಶ್​ ಶೆಟ್ಟಿ ಅಧ್ಯಕ್ಷತೆ:

ಬೆಪ್ಡೆ ಬಾಲಗೋಕುಲ ಅಧ್ಯಕ್ಷೆ ಉಷಾ ಪ್ರಕಾಶ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಾರ್ಕೂರು ಶ್ರೀನಾವಕ್ಷರಿ ಎನ್​.ಆರ್​.ದಾಮೋದರ ಶಮಾರ್ ಅವರು ಬೆಳಗೋಣ ಸಂಸ್ಕಾರ ದೀಪ ವಿಷಯ ಪ್ರಸ್ತುತಿಪಡಿಸಿದರು.

ಗಣ್ಯರ ಉಪಸ್ಥಿತಿ:

ಗ್ರಾಮ ವಿಕಾಸ ಮಂಗಳೂರು ವಿಭಾಗ ಕಾರ್ಯಕಾರಿಣಿ ಸದಸ್ಯೆ ರಮೀತಾ ಸೂರ್ಯವಂಶಿ ಕಾರ್ಕಳ, ಉಡುಪಿ ಜಿಲ್ಲಾ ಗ್ರಾಮ ವಿಕಾಸ ಸಹ ಸಂಯೋಜಕ ವೈ.ಸುಧಾಕರ ಆಜ್ರಿ, ಉಡುಪಿ ಜಿಲ್ಲಾ ಗ್ರಾಮ ವಿಕಾಸ ಟೋಳಿ ಸದಸ್ಯ ಪ್ರತಾಪ ಕಿಣಿ ಸಿದ್ದಾಪುರ, ಕುದ್ರುಬಿಡು-ಕೊಳ್ಕೆಬೈಲು ಶ್ರೀಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಅಶೋಕ ಕುಮಾರ್​ ಹೆಗ್ಡೆ, ಶ್ರೀನಿವಾಸ ಬಾಯರಿ ಬೆಪ್ಡೆ, ಮಾರ್ಗದರ್ಶಕ ಕೃಷ್ಣಮೂರ್ತಿ ಕಾಮತ್​ ಕೊಂಜಾಡಿ ಉಪಸ್ಥಿತರಿದ್ದರು.
ಅನನ್ಯಾ ಸ್ವಾಗತಿಸಿದರು. ಪೂರ್ವಜಾ, ಶ್ರೀಯಾ, ಭುವನ್​ ಪ್ರಾರ್ಥಿಸಿದರು. ಉಷಾ ಪ್ರಕಾಶ್​ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಲತಾ ವರದಿ ವಾಚಿಸಿದರು. ಗಣೇಶ್​ ಅರಸಮ್ಮಕಾನು, ಸುದರ್ಶನ ಶೆಟ್ಟಿ ಆರ್ಡಿ ನಿರೂಪಿಸಿದರು. ಮೇಘನಾ ಶೆಟ್ಟಿ ವಂದಿಸಿದರು.