‘ಮನೆ-ಮನೆ ಸಾಹಿತ್ಯ’ ಅಭಿಯಾನದ ಎರಡನೆಯ ಕಾರ್ಯಕ್ರಮದಲ್ಲಿ ಡಾ.ಮೀನಾಕ್ಷಿ ರಾಮಚಂದ್ರ ಮಾತನಾಡಿದರು. ಹಿರಿಯ ಸಾಹಿತಿ ಲಕ್ಷ್ಮೀ ವಿ.ಭಟ್, ವಿಶ್ರಾಂತ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ಮೊದಲಾದವರಿದ್ದರು. 
ಉಡುಪಿ

ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು

ಇಂದಿರಾ ಎನ್ ಕೆ
ಮಂಜೇಶ್ವರ: ಜೀವನದಲ್ಲಿ ಸವಾಲುಗಳಿಗೆ ಹಿಂಜರಿಯಬಾರದು. ಒತ್ತಡ, ಸಮಸ್ಯೆಗಳು ಬದುಕಿನ ಅವಿಭಾಜ್ಯ ಅಂಗ. ಸಮಸ್ಯೆಗಳೇ ಬರಬಾರದು ಎನ್ನುವುದಕ್ಕಿಂತ ಸಮಸ್ಯೆಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಸಲಹೆ ನೀಡಿದರು.
ಹಿರಿಯ ಸಾಹಿತಿ ಲಕ್ಷ್ಮೀ ವಿ.ಭಟ್ ಮಂಜೇಶ್ವರ ಅವರ ನಿವಾಸದಲ್ಲಿ ಮನಸ್ವಿನಿ ಮಹಿಳಾ ವೇದಿಕೆಯ ‘ಮನೆ-ಮನೆ ಸಾಹಿತ್ಯ’ ಅಭಿಯಾನದ ಎರಡನೇ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ರಾಂತ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ಅಧ್ಯಕ್ಷತೆ ವಹಿಸಿ ಚಾಲನೆ ನೀಡಿದರು. ಲಲಿತಾಲಕ್ಷ್ಮೀ ಕುಳಮರ್ವ, ಡಾ.ಮೀನಾಕ್ಷಿ ರಾಮಚಂದ್ರ, ಜಯಲಕ್ಷ್ಮೀ ಕಾರಂತ ಹಾಗೂ ರತ್ನಾವತಿ ಬೈಕಾಡಿ ಅವರನ್ನು ಗೌರವಿಸಲಾಯಿತು.
ಹಿರಿಯ ಸಾಹಿತಿ ಲಕ್ಷ್ಮೀ ವಿ.ಭಟ್ ಮಂಜೇಶ್ವರ ಸ್ವಾಗತಿಸಿದರು. ಕವಯಿತ್ರಿ ಪ್ರಮೀಳಾ ಚುಳ್ಳಿಕಾನ ವಂದಿಸಿದರು. ಶಿಕ್ಷಕಿ ಸುಶೀಲಾ ಪದ್ಯಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಧನ್ಯಶ್ರೀ ಮೂಳೂರು ಪ್ರಾರ್ಥಿಸಿದರು. ಸಾಹಿತಿ ಜ್ಯೋತ್ಸ್ನಾ ಕಡಂದೇಲು ಕಾರ್ಯಕ್ರಮ ನಿರೂಪಿಸಿದರು.
ರತ್ನಾ ಕೆ.ಭಟ್ ತಲಂಜೇರಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಹಿರಿಯ ಸಾಹಿತಿ ವಿ.ಬಿ.ಕುಳಮರ್ವ, ಡಾ.ಕೊಳ್ಚಪ್ಪೆ ಗೋವಿಂದ ಭಟ್, ಸೀತಾಲಕ್ಷ್ಮೀ ವರ್ಮ, ಪ್ರಮೀಳಾ ಚುಳ್ಳಿಕಾನ, ಸುಶೀಲಾ ಪದ್ಯಾಣ, ಜ್ಯೋತ್ಸ್ನಾ ಕಡಂದೇಲು, ನಿರ್ಮಲ ಶೇಷಪ್ಪ ಖಂಡಿಗೆ, ಪ್ರಭಾವತಿ ಕೆದಿಲಾಯ, ಧನ್ಯಶ್ರೀ ಮೂಳೂರು, ಪಂಕಜಾ ರಾಮ್ ಭಟ್, ಲಕ್ಷ್ಮೀ ವಿ ಭಟ್ ಮಂಜೇಶ್ವರ ಮೊದಲಾದವರು ಸ್ವರಚಿತ ಕವನ ವಾಚಿಸಿದರು.