ರಾಜ್ಯಮಟ್ಟದ ರಾಗ್ನಾರಾಕ್ ಎನ್‌ಇಗ್ಮಾ-2026 ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶಾಸಕ ವಿ.ಸುನೀಲ್ ಕುವಾರ್ ವಾತನಾಡಿದರು. ಪ್ರಮುಖರಾದ ಸುಮಂತ್ ಪಡಿವಾಳ್, ಯೋಗಿಶ್ ಹೆಗ್ಡೆ, ವಾಲಿನಿ ಜೆ.ರಾವ್, ಪ್ರಕಾಶ್ ಮತ್ತಿತರರಿದ್ದರು.
ಕಾರ್ಕಳ: ಉತ್ಕೃಷ್ಟವಾದ ಪೈಪೋಟಿ ಮತ್ತು ತಂತ್ರಜ್ಞಾನ ವಿಕಾಸದ ಕಾಲಘಟ್ಟದಲ್ಲಿ ನಾವಿದ್ದು, ಕಲಿಕೆ ಮತ್ತು ವಿಚಾರಗಳಲ್ಲಿ ಹೊಸತನ ಕಂಡುಕೊಂಡಾಗ ವಾತ್ರ ಯಶಸ್ಸು ಸಾಧ್ಯವಾಗುತ್ತದೆ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಹೊಸತನದ ಯೋಚನೆಗಳಿಗೆ ಸ್ಫೂರ್ತಿ ತುಂಬುತ್ತವೆ. ದೇಶದ ಅಭಿವೃದ್ಧಿಗೆ ಯುವಜನತೆ ಕೈ ಜೋಡಿಸಬೇಕು ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುವಾರ್ ಹೇಳಿದರು.
ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜು ವತಿಯಿಂದ ಬುಧವಾರ ನಿಟ್ಟೆಯ ಸದಾನಂದ ಸಭಾಂಗಣದಲ್ಲಿ ರಾಜ್ಯಮಟ್ಟದ ರಾಗ್ನಾರಾಕ್ ಎನ್‌ಇಗ್ಮಾ-2026 ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ವಾತನಾಡಿದರು.
ವಿಫ್ಲಿ ಇಂಡಿಯಾ ಕಾರ್ಯನಿರ್ವಾಹಕ ಮುಖ್ಯಸ್ಥ ಸುಮಂತ್ ಪಡಿವಾಳ್ ವಾತನಾಡಿ, ವಿದ್ಯಾರ್ಥಿಗಳು ಕಲಿಕೆಯನ್ನು ಅಕಾಡೆಮಿಕ್ ಕಲಿಕೆಗೆ ಸೀಮಿತಗೊಳಿಸಕೊಳ್ಳಬಾರದು. ಆಧುನಿಕ ಕಂಪನಿಗಳು ನೌಕರರಲ್ಲಿ ಅಂಕಗಳ ಜತೆಗೆ ತಂಡವಾಗಿ ಕೆಲಸ ನಿರ್ವಹಿಸುವ ಕೌಶಲ, ಸಂವಹನ ಹಾಗೂ ಕುತೂಹಲ ಭರಿತ ಯುವ ಜನತೆಯನ್ನು ಅಪೇಕ್ಷಿಸುತ್ತಿವೆ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್‌ನ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಯೋಗಿಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪರಿಷತ್ ಸಂಯೋಜಕಿ ವಾಲಿನಿ ಜೆ.ರಾವ್, ಐಕ್ಯೂಎಸಿ ಸಂಯೋಜಕ ಪ್ರಕಾಶ್ ಉಪಸ್ಥಿತರಿದ್ದರು. ಡಾ.ವೀಣಾ ಕುವಾರಿ ಬಿ.ಕೆ. ಸ್ವಾಗತಿಸಿದರು. ರೇಖಾ ವಂದಿಸಿದರು. ಶ್ರೀವತ್ಸಾ ವಿ. ಸ್ಪರ್ಧೆಯ ರೂಪುರೇಷೆ ವಿವರಿಸಿದರು. ನಿಭಾ ಶೆಟ್ಟಿ ನಿರೂಪಿಸಿದರು.