ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂದ 100 ಕೋಟಿ ರೂ. ಠೇವಣಿ ಸಂಭ್ರವಾಚರಣೆ ಕಾರ್ಯಕ್ರಮವನ್ನು ಶಿವಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.
ಕುಂದಾಪುರ: ಧಾರ್ಮಿಕ ವಾತಾವರಣವಿರುವ ಹಾಗೂ ದೇವರ ಸ್ಮರಣೆ ಇರುವ ಕಡೆಗಳಲ್ಲಿ ಲಕ್ಷ್ಮೀದೇವಿ ವಾಸವಿರುತ್ತದೆ. ದೇವರ ಕೃಪೆ, ಪುಣ್ಯದ ಲವಿಲ್ಲದೆ ಯಾವುದೇ ಕೆಲಸದಲ್ಲಿ ಯಶಸ್ಸು ದೊರೆಯದು ಎಂದು ಶ್ರೀ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂದ 100 ಕೋಟಿ ರೂ. ಠೇವಣಿ ಸಂಭ್ರಮಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಸ್ಥೆಯು ಲಾಭದಲ್ಲಿ ಒಂದಂಶವನ್ನು ಸಮಾಜ ಕಲ್ಯಾಣಕ್ಕಾಗಿ ಉಪಯೋಗಿಸುತ್ತಿರುವುದು ಶ್ಲಾಘನಾರ್ಹ. ಶತ ಕೋಟಿ ಸಂಗ್ರಹವಾಗಿರುವ ಠೇವಣಿ ಮುಂದೆ 200 ಕೋಟಿ ರೂ. ತನಕ ಬೆಳೆಯಲಿ ಎಂದು ಹಾರೈಸಿದರು.
ಸಂಸ್ಥೆ ಅಧ್ಯಕ್ಷ ಜಿ.ವೆಂಕಟೇಶ ಶೆಣೈ, ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ ಶ್ರೀಗಳ ಪಾದಪೂಜೆ ನೆರವೇರಿಸಿದರು. ನಿರ್ದೇಶಕರಾದ ಎನ್.ವಾಧವ ಕಿಣಿ, ಬಿ.ರಾವೇಂದ್ರ ಪೈ, ಕೆ.ರಾಮನಾಥ ನಾಯಕ್, ಎಂ.ಜಿ.ನಾಗಪ್ರಸಾದ ಪೈ, ಕೆ.ಗೋಪಾಲಕೃಷ್ಣ ನಾಯಕ್, ಜಿ.ವೆಂಕಟೇಶ ನಾಯಕ್, ವಿಷ್ಣು ಪ್ರಭು, ವಾಲಾ ಕೆ.ನಾಯಕ್, ಗೀತಾ ಜಿ.ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್, ಸಿಬ್ಬಂದಿ, ವಾಜಿ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.
ಜಿ.ವೆಂಕಟೇಶ ಶೆಣೈ ಸ್ವಾಗತಿಸಿದರು. ಗಣೇಶ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು.