ನೂತನ ಅಧ್ಯಕ್ಷ ರೋಹಿತ್ ಬಿ.ಬಿ. ಅವರಿಗೆ ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಯಶಸ್ವಿ ಸೋಮಶೇಖರ್ ಪದಪ್ರದಾನ ಮಾಡಿದರು. ಪ್ರಮುಖರಾದ ಜಯಪ್ರಕಾಶ್ ಆರ್, ಸವಣೂರು ಸೀತಾರಾಮ ರೈ, ಬಾಲಕೃಷ್ಣ ಪೈ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಸುಬ್ರಹ್ಮಣ್ಯ ರೋಟರಿ ಕ್ಲಬ್ ಪದಗ್ರಹಣ

ಸುಬ್ರಹ್ಮಣ್ಯ: ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಯೇನೆಕಲ್ಲಿನ ಕೃಷಿಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಸಭಾಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್ ನೂತನ ಅಧ್ಯಕ್ಷ ರೋಹಿತ್ ಬಿ.ಬಿ. ಅವರಿಗೆ ಪದಪ್ರದಾನ ಮಾಡಿದರು. ನೂತನ ಕಾರ್ಯದರ್ಶಿ ಪ್ರಶಾಂತ್ ಕೋಡಿಬೈಲ್, ಸಾರ್ಜೆಂಟ್ ಅಟ್ ಆರಂ ಗಿರೀಶ್ ಹಾಗೂ ಪದಾಧಿಕಾರಿಗಳಿಗೆ ರೋಟರಿ ಪಿನ್ ತೊಡಿಸಿ ಪದವಿ ನೀಡಲಾಯಿತು.
ಪೌಲ್ ಹ್ಯಾರಿಸ್ ಫೆಲೋಶಿಪ್‌ಗೆ ದೇಣಿಗೆ ನೀಡಿ ಪದವಿ ಪಡೆದ ಪೂರ್ವಾಧ್ಯಕ್ಷ ವಿಶ್ವನಾಥ ನಡುತೋಟ ಹಾಗೂ ಪೂರ್ವ ಕಾರ್ಯದರ್ಶಿ ಚಿದಾನಂದ ಕುಳ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಸಾಧಕರನ್ನು ಗೌರವಿಸಲಾಯಿತು. ಸುಬ್ರಹ್ಮಣ್ಯ ರೋಟರಿ ಕ್ಲಬ್‌ಗೆ ವೆಂಕಟೇಶ್ ಎಸ್.ಸಿ. ಅವರನ್ನು ಸ್ವಾಗತಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಭವಾನಿ ಶಂಕರ್, ನಿಕಟಪೂರ್ವ ಎಜಿ ಪ್ರೊ.ಬಾಲಕೃಷ್ಣ ಪೈ ಅವರನ್ನು ಗೌರವಿಸಲಾಯಿತು. ಅಸಿಸ್ಟೆಂಟ್ ಗವರ್ನರ್ ರಜಾಕ್ ಕಬಕ್ಕಾಕರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸ್ವಚ್ಛ ಸುಬ್ರಹ್ಮಣ್ಯ ಬ್ಯಾನರ್ ಬಿಡುಗಡೆ ಮಾಡಲಾಯಿತು.
ಜಿ.ಎಸ್.ಆರ್. ಸವಣೂರು ಸೀತಾರಾಮ ರೈ, ಜೋನಲ್ ಲೆಫ್ಟಿನೆಂಟ್ ಚಂದ್ರಶೇಖರ ನಾಯರ್, ಸುಳ್ಯ ರೋಟರಿ ಅಧ್ಯಕ್ಷೆ ಲತಾ ಮಧುಸೂದನ್ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ಗೋಪಾಲ ಎಣ್ಣೆಮಜಲು ನಿರೂಪಿಸಿದರು. ರಾಮಕೃಷ್ಣ ಮಲ್ಲಾರ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಕೋಡಿಬೈಲ್ ವಂದಿಸಿದರು.