ಮೊಸರುಕುಡಿಕೆ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪದವೀಧರೆ ಡಾ.ರಝೀನಾ, ಅಂಗನವಾಡಿ ಶಿಕ್ಷಕಿ ಉಷಾ ಹಾಗೂ ಪ್ರಗತಿಪರ ಕೃಷಿಕೆ ಸ್ಟ್ಯಾನ್ಲಿ ವಿನ್ಸೆಂಟ್ ಐವನ್ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಬೇರೆ ಬೇರೆ ಹೆಸರುಗಳನ್ನು ಕೊಟ್ಟರೂ ನಮ್ಮ ಪ್ರಾರ್ಥನೆ ಸೇರುವುದು ಓರ್ವ ದೇವನಿಗೆ ಮಾತ್ರ. ಆದರೆ ನಾವಿಂದು ನಮ್ಮ ಧಾರ್ಮಿಕ ಗ್ರಂಥಗಳನ್ನು ರಾಜಕೀಯ ದೃಷ್ಟಿಯಿಂದ ಓದುತ್ತಿರುವುದರಿಂದ ಇನ್ನೊಂದು ಧರ್ಮೀಯರು ಶತ್ರು ಎನ್ನುವ ಭಾವನೆ ಮೂಡುವಂತಾಗಿದೆ ಎಂದು ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಖೇದ ವ್ಯಕ್ತಪಡಿಸಿದರು.
ಕೊಣಾಜೆಯ ಮಂಗಳ ಗ್ರಾಮೀಣ ಯುವಕ ಸಂಘದ ಆಶ್ರಯದಲ್ಲಿ ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘ ಹಾಗೂ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿಯ ಸಹಕಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೊಣಾಜೆಯಲ್ಲಿ ಶುಕ್ರವಾರ 23ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆ ಉತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾಕ್ಟರೇಟ್ ಪದವೀಧರೆ ಡಾ.ರಝೀನಾ, ಅಂಗನವಾಡಿ ಶಿಕ್ಷಕಿ ಉಷಾ ಹಾಗೂ ಪ್ರಗತಿಪರ ಕೃಷಿಕೆ ಸ್ಟ್ಯಾನ್ಲಿ ವಿನ್ಸೆಂಟ್ ಐವನ್ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯನ್ನು ಗೌರವಿಸಲಾಯಿತು.
ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಪಿ.ವಿ.ಮೋಹನ್, ಸಮಾಜ ಸೇವಕ ನಾಸೀರ್ ಎನ್.ಎಸ್.ನಡುಪದವು, ಕೊಣಾಜೆಪದವು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಗಾಯತ್ರಿ ಬಿ., ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ನಾಯಕ್, ಎಪಿಎಂಸಿಯ ಮಾಜಿ ಉಪಾಧ್ಯಕ್ಷೆ ಮುತ್ತು ಶೆಟ್ಟಿ, ಎನ್‌ಎಸ್‌ಯುಐ ಕಾರ್ಯದರ್ಶಿ ಯು.ಟಿ.ಫರೀದ್, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಪೂಜಾರಿ, ರಾಜ್ಯ ವಕ್ಫ್ ಸಲಹಾ ಸಮಿತಿ ಸದಸ್ಯ ಅಬ್ದುಲ್ ರಹ್ಮಾನ್ ಕೋಡಿಜಾಲ್, ಕುತ್ತಾರ್ ಶ್ರೀ ಸಿದ್ಧಿವಿನಾಯಕ ರಾಜರಾಜೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷ ವಿವೇಕಾನಂದ ಎಲ್.ಸನಿಲ್, ನಿವೃತ್ತ ಸರ್ಕಾರಿ ನೌಕರ ಸುರೇಂದ್ರ ರೈ, ಕೊಣಾಜೆ ಗ್ರಾ.ಪಂ.ಮಾಜಿ ಸದಸ್ಯ ಹಸನ್ ಕುಂಞ ಕೋಡಿಜಾಲ್, ಮಂಗಳ ಗ್ರಾಮೀಣ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಕೊಣಾಜೆ ಉಪಸ್ಥಿತರಿದ್ದರು. ಮಂಗಳ ಗ್ರಾಮೀಣ ಯುವಕ ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ ಸ್ವಾಗತಿಸಿದರು.
ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘದ ಅಧ್ಯಕ್ಷ ಅಚ್ಚುತ ಗಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ವನಿತಾ ಸ್ಪರ್ಧಾ ವಿಜೇತರ ಹೆಸರು ವಾಚಿಸಿದರು. ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್ ವಂದಿಸಿದರು. ಶಿಕ್ಷಕಿ ಸುರೇಖಾ ಪೂಜಾರಿ ನಿರೂಪಿಸಿದರು.