ಶಿರ್ವ ವಿದ್ಯಾವರ್ಧಕ ಆಂಗ್ಲ ವಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಬೀಳ್ಕೊಡುಗೆ, ಆಶೀರ್ವಚನ ಕಾರ್ಯಕ್ರಮ ನಡೆಯಿತು. ಹಳೇ ವಿದ್ಯಾರ್ಥಿನಿ ಕು.ಹರ್ಷಿತಾ ಶೆಣೈ ಉಪಸ್ಥಿತರಿದ್ದರು 
ಉಡುಪಿ

ವಿದ್ಯಾರ್ಥಿಗಳು ಸಾಧ್ಯವಾದಾಗ ಋಣ ತೀರಿಸಿ

ಶಿರ್ವ: ನಮ್ಮ ಜೀವನದ ಬೆಳವಣಿಗೆಯಲ್ಲಿ ಹೆತ್ತವರ ತ್ಯಾಗ, ಗುರುಹಿರಿಯರ ಮತ್ತು ಸವಾಜದ ಕೊಡುಗೆ ಇದ್ದು ಸಾಧ್ಯವಾದಾಗ ಈ ಋಣವನ್ನು ತೀರಿಸಲು ಪ್ರಯತ್ನಿಸಬೇಕು ಎಂದು ಶಾಲಾ ಸಂಚಾಲಕ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಶಿರ್ವ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹೆತ್ತವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ನಡೆದ ಬೀಳ್ಕೊಡುಗೆ, ಆಶೀರ್ವಚನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾವರ್ಧಕ ಸಂದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಮಾತನಾಡಿ, ಸ್ವದೇಶದಲ್ಲಿ ಲಭ್ಯವಿರುವ ಆರ್ಥಿಕ ನೆರವು ಮತ್ತು ಸೌಭ್ಯಗಳನ್ನು ಪಡೆದು ಕಲಿಕೆಯ ನಂತರ ವಿದೇಶದಲ್ಲಿ ನೆಲೆಸುವ ಬಗ್ಗೆ ಯೋಚಿಸದೆ ನಮ್ಮ ದೇಶದಲ್ಲಿಯೇ ಇದ್ದು ಕುಟುಂಬದ ಮತ್ತು ಸವಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದರು.
ಶಾಲಾ ತರಗತಿಗಳಲ್ಲಿ ಕಲಿಕಾ ಸೌಲಭ್ಯಗಳನ್ನು ಉನ್ನತೀಕರಿಸಲು ವಿದ್ಯಾರ್ಥಿಗಳು 80,000 ರೂ. ಕೊಡುಗೆಯನ್ನು ಸಂಚಾಲಕರಿಗೆ ಹಸ್ತಾಂತರಿಸಿದರು. ಹಳೇ ವಿದ್ಯಾರ್ಥಿನಿ ಕು.ಹರ್ಷಿತಾ ಶೆಣೈ ಉಪಸ್ಥಿತರಿದ್ದರು. ಪ್ರಾಂಶುಪಾಲೆ ನೀಶಾ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ನಿಮಿತಾ ವಂದಿಸಿದರು. ಶಿಕ್ಷಕಿ ಅನಿತಾ ಉಪಾಧ್ಯಾಯ ನಿರೂಪಿಸಿದರು.