ಕಟಪಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಮುಖರಾದ ಗುರ್ಮೆ ಸುರೇಶ್ ಶೆಟ್ಟಿ, ಕೆ.ಸತ್ಯೇಂದ್ರ ಪೈ, ಶಿವಾನಂದ ಕೋಟ್ಯಾನ್ ಮತ್ತಿತರರಿದ್ದರು. 
ಉಡುಪಿ

ವಿದ್ಯಾರ್ಥಿಗಳು ಆಗಬೇಕಿದೆ ಸಮಾಜಕ್ಕೆ ವರ

ಪಡುಬಿದ್ರಿ: ವಿದ್ಯಾರ್ಥಿಗಳನ್ನು ಸಮಾಜಕ್ಕೆ ಹೊರೆಯಾಗದೆ ವರವಾಗುವಂತೆ ಬೆಳೆಸಬೇಕು ಎಂದು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
ಕಟಪಾಡಿ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘ, ಕಟಪಾಡಿ ಮಾನ್ಯ ಕಲ್ಚರಲ್ ಆ್ಯಂಡ್ ಎಜುಕೇಷನಲ್ ಫೌಂಡೇಶನ್, ಮಂಗಳೂರು ಇನ್ವೆಂಜರ್ ಫೌಂಡೇಶನ್ ವತಿಯಿಂದ ಕಟಪಾಡಿ ಎಸ್.ವಿ.ಎಸ್. ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನಲ್ಲಿ ಶೈಕ್ಷಣಿಕ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 50 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಟಪಾಡಿ ಎಸ್.ವಿ.ಎಸ್.ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಸತ್ಯೇಂದ್ರ ಪೈ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರಾದ ಕೆ.ಸತ್ಯೇಂದ್ರ ಪೈ, ಶಿವಾನಂದ ಕೋಟ್ಯಾನ್ ಕಟಪಾಡಿ, ರಜಾಕ್ ಪುತ್ತೂರು, ಅಶ್ವಿನಿ ಸಂದೀಪ್, ಪ್ರಕಾಶ್ ಸುವರ್ಣ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು. ಮಾನ್ಯ ಕಲ್ಚರಲ್ ಆ್ಯಂಡ್ ಎಜುಕೇಷನಲ್ ಫೌಂಡೇಶನ್ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಕಟಪಾಡಿ, ಸುನೀಲ್ ಸಾಲ್ಯಾನ್ ಕಡೆಕಾರ್, ಪತ್ರಕರ್ತ ರವೀಂದ್ರ ಶೆಟ್ಟಿ, ಎಸ್‌ವಿಎಸ್ ವಿದ್ಯಾವವರ್ಧಕ ಸಂಘದ ಸದಸ್ಯ ಗಣೇಶ್ ಕಿಣಿ, ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ, ಎಸ್‌ವಿಎಸ್, ಎಸ್‌ವಿಕೆ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ದೇವೇಂದ್ರ ನಾಯಕ್ ಹಾಗೂ ಸುಜಾ ಜೆ. ಉಪಸ್ಥಿತರಿದ್ದರು. ಪ್ರಕಾಶ್ ಸುವರ್ಣ ನಿರೂಪಿಸಿದರು. ಭಾಸ್ಕರ್ ಕಾಮತ್ ವಂದಿಸಿದರು.

ಮೂರೂ ಸಂಸ್ಥೆಗಳು ಮುಂಬರುವ ದಿನಗಳಲ್ಲೂ ಸಾಧ್ಯವಾದಷ್ಟು ಶೈಕ್ಷಣಿಕ, ಆರೋಗ್ಯ ಸಂಬಂಧಿ ನೆರವು ನೀಡಲು ಬದ್ಧವಾಗಿದ್ದು, ಇನ್ನಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ಸಂಕಲ್ಪ ಹೊಂದಿದ್ದೇವೆ.

— ಕೆ.ಸತ್ಯೇಂದ್ರ ಪೈ, ಸಂಚಾಲಕ, ಕಟಪಾಡಿ ಎಸ್.ವಿ.ಎಸ್.ವಿದ್ಯಾವರ್ಧಕ ಸಂಘ