ರಹ್ಮಾನಿಯಾ ಮಸೀದಿ, ಮದ್ರಸಾ ಮತ್ತು ಶಾಲಾವರಣಕ್ಕೆ ಅಳವಡಿಸಲಾದ ಇಂಟರ್‌ಲಾಕ್ ಸೌಲಭ್ಯವನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ರಹ್ಮಾನಿಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೊಹ್ಸೀನ್ ರಹ್ಮಾನ್, ಉಪಾಧ್ಯಕ್ಷ ಹಿದಾಯತುಲ್ಲಾ, ಮಾಜಿ ಅಧ್ಯಕ್ಷರಾದ ಅಬ್ಬಾಸ್ ಮಜಲ್ ಇನ್ನಿತರರು ಉಪಸ್ಥಿತರಿದ್ದರು. 
ಉಡುಪಿ

ವಿದ್ಯಾರ್ಥಿಗಳು ದೇಶದ ಆಸ್ತಿಗಳಾಗಬೇಕು

ವಿಜಯವಾಣಿ ಸುದಿಜಾಲ ಉಳ್ಳಾಲ


ತಮ್ಮೂರಿನ ಮಕ್ಕಳು ಸುಶಿಕ್ಷಿತರಾಗಬೇಕು ಎನ್ನುವ ನಿಟ್ಟಿನಲ್ಲಿ ಹಿರಿಯರು ಶಾಲೆ ಆರಂಭಿಸಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಪಾಲಕರ ಮಾತ್ರವಲ್ಲದೆ, ಸಮಾಜ, ದೇಶದ ಆಸ್ತಿ, ಸಂಪತ್ತು ಆಗಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಸೋಮೇಶ್ವರ ಉಚ್ಚಿಲ ರಹ್ಮಾನಿಯಾ ಮಸೀದಿ, ಹಯಾತುಲ್ ಇಸ್ಲಾಮ್ ಮದ್ರಸಾ ಮತ್ತು ಶಾಲಾವರಣಕ್ಕೆ ಅಳವಡಿಸಲಾದ ಇಂಟರ್‌ಲಾಕ್ ಸೌಲಭ್ಯ ಗುರುವಾರ ಉದ್ಘಾಟಿಸಿ ಮಾತನಾಡಿದರು. ರಹ್ಮಾನಿಯಾ ಸಮೂಹ ಸಂಸ್ಥೆ ಅಧ್ಯಕ್ಷ ಮೊಹ್ಸೀನ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಹಿದಾಯತುಲ್ಲಾ, ಮಾಜಿ ಅಧ್ಯಕ್ಷರಾದ ಅಬ್ಬಾಸ್ ಮಜಲ್, ಅಬ್ಬಾಸ್ ಪೆರಿಬೈಲ್, ಮಹಮ್ಮದ್ ಅಲಿ ಜಿ.ಐ, ಪುರಸಭಾ ಸದಸ್ಯ ಅಬ್ದುಲ್ ಸಲಾಂ ಯು., ರಹ್ಮಾನಿಯಾ ಮಸೀದಿ ಸದರ್ ಮುಅಲ್ಲಿಂ ಸ ಈದ್ ಫೈಝಿ ಮಡಿಕೇರಿ, ಶಾಲೆ ಮುಖ್ಯ ಶಿಕ್ಷಕಿ ಸಂಧ್ಯಾ, ಪದಾಧಿಕಾರಿಗಳಾದ ಅಬ್ದುಲ್ ಮಜೀದ್, ನಾಸೀರ್ ಖಾನ್, ಅಹ್ಮದ್ ಪೆರಿಬೈಲ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಲಾಂ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.