ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ-ಶಾಸ್ತ್ರೀ ಜಯಂತಿ ಆಚರಿಸಲಾಯಿತು. ಕೆ.ಅಣ್ಣಪ್ಪ ಶೆಣೈ, ವಿದ್ಯಾ ಅಮರ್​ ಪೈ, ಶಶಿರಾಜ್​ ಕುಂದರ್​, ಕೆ.ವಿನಾಯಕ್​ ಕಿಣಿ, ರೇಷ್ಮಾ ಪ್ರಭು ಇತರರಿದ್ದರು. 
ಉಡುಪಿ

ವಿದ್ಯಾರ್ಥಿಗಳೂ ಅಳವಡಿಸಿಕೊಳ್ಳಲಿ ಮಹಾತ್ಮರ ಸರಳತೆ

* ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಕಿವಿಮಾತು

* ಇಂದ್ರಾಳಿ ಶಾಲೆಯಲ್ಲಿ ಗಾಂಧಿ-ಶಾಸ್ತ್ರೀ ಜಯಂತಿ

ಉಡುಪಿ: ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಮಹಾತ್ಮ ಗಾಂಧೀಜಿ ಮತ್ತು ಲಾಲ್​ ಬಹಾದ್ದೂರ್​ ಶಾಸ್ತ್ರೀ ಅವರ ಜೀವನ ಪ್ರೇರಣಾದಾಯಕವಾಗಿದೆ. ಅವರ ತ್ಯಾಗ, ದೇಶ ಪ್ರೇಮ ಅನನ್ಯ. ವಿದ್ಯಾರ್ಥಿಗಳೂ ಸಹ ಅಂತಹ ಮಹಾತ್ಮರ ಸರಳತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಕಿವಿಮಾತು ಹೇಳಿದರು.

ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ (ಅ.2) ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್​ ಬಹಾದ್ದೂರ್​ ಶಾಸ್ತ್ರೀ ಜನ್ಮದಿನ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ನೆರೆವೇರಿತು.

ಶಾಲಾ ಆಡಳಿತ ಮಂಡಳಿಯ ಸದಸ್ಯೆ ವಿದ್ಯಾ ಅಮರ್​ ಪೈ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಶಿರಾಜ್​ ಕುಂದರ್​, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ವಿನಾಯಕ್​ ಕಿಣಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಷ್ಮಾ ಪ್ರಭು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕೀರ್ತನಾ ಶಾಸ್ತ್ರೀಜಿ ಕುರಿತು ಹಾಗೂ ಧೃತಿ ಪಿ.ಎನ್​. ಗಾಂಧೀಜಿ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಾದ ದಿನೇಶ್​ ಕುಡ್ವ ಸ್ವಾಗತಿಸಿದರು. ಸಾನ್ವಿ ಕಾರ್ಯಕ್ರಮ ನಿರೂಪಿಸಿದರು. ಯೋಗಿತಾ ವಂದಿಸಿದರು.