ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ. 
ಉಡುಪಿ

ಹೋರಾಟನಿರತ ಯುವಕರಿಗಾಗಿದೆ ಸತ್ಯದರ್ಶನ

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ

*ಕಾಕ್ರೋಚ್​ಗಳ ನಿರೀಕ್ಷೆ ಹುಸಿ ಮಾಡಿದ ಪ್ರಧಾನಿ ಮೋದಿ

ಉಡುಪಿ: ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆದ ಪ್ರತಿಭಟನೆಯು ಭಯೋತ್ಪಾದಕರಿಗೆ ಪ್ರೇರಣೆ ಕೊಡುವ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಅವಕಾಶ ಮಾಡಿಕೊಟ್ಟಂತಿದೆ. ಪ್ರತಿಭಟನಾ ನಿರತ ಕಾಕ್ರೋಚ್​ಗಳಿಗೆ ಗಲಭೆ, ಗಲಾಟೆ, ನೂಕಾಟ, ಗೋಲಿಬಾರ್​, ಪ್ರಾಣ ಹಾನಿ ಆಗಬೇಕು ಎನ್ನುವ ನಿರೀಕ್ಷೆ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಗಟ್ಟಿಯಾಗಿ ನಿಂತು ಅದ್ಯಾವುದೂ ಟಿಸಲು ಅವಕಾಶ ನೀಡಿಲ್ಲ. ದೇಶ ಎಲ್ಲವನ್ನೂ ಗಮನಿಸುತ್ತಿದೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಡುಪಿಯಲ್ಲಿ ಶನಿವಾರ (ಜು.25) ಮಾಧ್ಯಮದವರೊಂದಿಗೆ ಮಾತನಾಡಿ, ಈಗ ಯಾವ ವಿದ್ಯಾರ್ಥಿಗಳೂ ಪ್ರತಿಭಟನಾ ಸ್ಥಳದಲ್ಲಿಲ್ಲ. ಹೆತ್ತವರೇ ಮಕ್ಕಳಿಗೆ ಬುದ್ಧಿ ಹೇಳಿ ವಾಪಸ್​ ಕರೆಸಿದ್ದಾರೆ ಎಂದರು.

ಬದಲಾವಣೆ ಅರಿಯದ ಮಕ್ಕಳು

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಹಿಡಿದು 12 ವರ್ಷ ಕಳೆದಿದೆ. ಈಗಿನ ಯುವಕರಿಗೆ ಮೋದಿ ಅವರ ಮೊದಲಿನ ಆಡಳಿತ ಹೇಗಿತ್ತು ಎಂಬ ಅರಿವಿಲ್ಲ. ಅವರು ಪ್ರಧಾನಿಯಾಗುವ ಮೊದಲು ಬಸ್​ ನಿಲ್ದಾಣ, ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಅಪರಿಚಿತ ವಸ್ತು ಮುಟ್ಟಬೇಡಿ, ಬಾಂಬ್​ ಇರಬಹುದು ಎಂದು ಧ್ವನಿವರ್ಧಕದ ಮೂಲಕ ಎಚ್ಚರಿಸಲಾಗುತ್ತಿತ್ತು. ಆಗ ಈ 18&19 ವರ್ಷದ ಹುಡುಗರು ತಂದೆ&ತಾಯಿಯ ಕೈ ಹಿಡಿದು ಹೋಗುವ ಸಣ್ಣಪ್ರಾಯದಲ್ಲಿದ್ದರು. ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಆದ ಮಹತ್ವದ ಬದಲಾವಣೆ ಈಗ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹುಡುಗರಿಗೆ ಗೊತ್ತಿಲ್ಲ. ಆ ಕಾರಣಕ್ಕೆ ಅವರು ಕ್ರಾಕೋಚ್​ಗಳತ್ತ ಆಕರ್ಷಿತರಾಗಿದ್ದಾರೆ. ಏನೋ ಒಳ್ಳೆಯ ಚಳವಳಿ ಆಗುತ್ತಿದೆ ಎಂದು ನಂಬಿದ್ದರು. ಇದೀಗ ಆ ಯುವಕರಿಗೆ ಸತ್ಯದರ್ಶನ ಆಗಿದೆ ಎಂದರು.

ಕೇಂದ್ರ ಸರ್ಕಾರ ಎಡವಿಲ್ಲ

ಪ್ರಧಾನಿ ಮೋದಿ ಮೂಲಕ ಸಮರ್ಥ ಭಾರತ ದೇಶ ಕಟ್ಟುವ ಕೆಲಸ ಆಗುತ್ತಿದೆ. ಇದನ್ನು ಸಹಿಸದ ಭಯೋತ್ಪಾದಕರು, ರಾಷ್ಟ್ರ ವಿರೋಧಿಗಳು ಸೇರಿ ಪ್ರಧಾನಿ ಮನೆಗೆ ನುಗ್ಗುವ ಷಡ್ಯಂತ್ರ ಮಾಡಿದ್ದರು. ಸಿಜೆಪಿ ಹೋರಾಟ ನಿಭಾಯಿಸುವಲ್ಲಿ ಅಥವಾ ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಆದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ಎಡವಿಲ್ಲ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದೆಂದು ಮತ್ತೆ ಪರೀಕ್ಷೆಯನ್ನೂ ಮಾಡಲಾಗಿದೆ. ಪ್ರಧಾನಿ ಪ್ರತಿಕ್ರಿಯೆ ನೀಡಲು ವಿಳಂಬ ಮಾಡಿದ್ದರೂ ಸಹ ಇದೀಗ ಕಾಕ್ರೋಜ್​ ಹೋರಾಟದ ಹಿಂದಿನ ಮರ್ಮ ದೇಶದ ಜನತೆಗೆ ತಿಳಿದಿದೆ. ರಾಷ್ಟ್ರದ ಹಿತಕ್ಕಾಗಿ ಪ್ರಧಾನಿ ಮೋದಿ ಅವರೊಂದಿಗೆ ಇಡೀ ದೇಶ ಒಟ್ಟಾಗಿ ನಿಲ್ಲಬೇಕು ಎಂದು ಕೋಟ ಪೂಜಾರಿ ತಿಳಿಸಿದರು.

ಭಯೋತ್ಪಾದಕರಿಗೆ ಬೆಂಬಲ ಕಾಂಗ್ರೆಸ್​ನ ಮನಸ್ಥಿತಿ

ಪ್ರಧಾನಿ ಮೋದಿ ಅವರ ಸ್ವಾರ್ಥ ರಹಿತ ದೇಶ ಸೇವೆಯಿಂದ ವಿಪಕ್ಷಗಳಿಗೆ ವಿರೋಧಿಸಲು ವಿಷಯವೇ ಲಭಿಸುತ್ತಿರಲಿಲ್ಲ. ಹೀಗಾಗಿ ಸಿಜೆಪಿಯ ಜಂತರ್​ ಮಂತರ್​ ಚಳವಳಿಯನ್ನೇ ಅವರೂ ಬಳಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ಕಾಂಗ್ರೆಸ್​ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದೆ. ರಾಹುಲ್​ ಗಾಂಧಿ ಅಂಗಾತ ಮಲಗಿ ಪ್ರತಿಭಟಿಸಿದ್ದಾರೆ. ಉಮರ್​ ಖಾಲಿದ್​ ಒಬ್ಬ ಭಯೋತ್ಪಾದಕ. ಆತನಿಗೆ ಜಾಮೀನು ಕೊಟ್ಟರೆ ಅನಾಹುತ ಆಗುತ್ತದೆಂದು ಸುಪ್ರೀಂ ಕೋರ್ಟ್​ ಜಾಮೀನು ನೀಡಿಲ್ಲ. ಆತನ ಬಿಡುಗಡೆಗೂ ಆಗ್ರಹಿಸುತ್ತಾರೆ. ಕಾಕ್ರೋಜ್​ ಪ್ರತಿಭಟನೆಯಲ್ಲಿ ಕಾಂಗ್ರೆಸ್​ ಬೆಂಬಲಿತ ಫ್ಲೆಕ್ಸ್​ ಪ್ರತ್ಯಕ್ಷವಾಗಿದೆ. ಇದು ಭಯೋತ್ಪಾದಕರಿಗೆ ನೇರ ಬೆಂಬಲ ಕೊಟ್ಟಂತಾಗಿದೆ. ಭಯೋತ್ಪಾದಕರನ್ನು ಬೆಂಬಲಿಸುವುದೇ ಕಾಂಗ್ರೆಸ್​ನ ಮಾನಸಿಕ ಸ್ಥಿತಿಯಾಗಿದೆ ಎಂದು ಸಂಸದ ಕೋಟ ಆರೋಪಿಸಿದರು.
"

ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ಕೊಡಬೇಕು ಎನ್ನುವವರು ಲೋಕಸೇವಾ ಆಯೋಗದಲ್ಲಿ ನಡೆದಿರುವ ಕರ್ಮಕಾಂಡ ಒಮ್ಮೆ ನೆನಪು ಮಾಡಿಕೊಳ್ಳಿ. ಒಂದು ಹುದ್ದೆಗೆ 80 ಲಕ್ಷ ರೂ. ಲಂಚ ಕೇಳುತ್ತಿದ್ದಾರೆ. ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಅನ್ನಿಸದೇ? ಧಮೇರ್ಂದ್ರ ಪ್ರಧಾನ್​ ರಾಜೀನಾಮೆ ಕೊಡಬೇಕಾದ ಅನಿವಾರ್ಯತೆ ಇರಲಿಲ್ಲ. ಆದರೂ ಪ್ರಧಾನಿ ಮೋದಿ ಅದನ್ನು ಜಾಗೃತೆಯಿಂದ ನಿಭಾಯಿಸುತ್ತಿದ್ದಾರೆ. ನೀಟ್​ ಪರೀಕ್ಷೆಯ ಅನಾಹುತ ಮತ್ತೆ ಘಟಿಸದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ-ಚಿಕ್ಕಮಗಳೂರು ಸಂಸದ.