ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು 'ಸುಧನ್ವ ಕಾಳಗ' ಯಕ್ಷಗಾನ ಪ್ರಸಂಗ ಪ್ರದರ್ಶಿಸಿದರು. ಡಾ. ಬಿ.ಜಗದೀಶ್ ಶೆಟ್ಟಿ, ಉಮೇಶ್ ಸುವರ್ಣ, ನಾಗಾರಾಜ್ ಶಂಕರನಾರಾಯಣ, ಬಸವ ಮುಂಡಾಡಿ, ಕೃಷ್ಣಮೂರ್ತಿ ಭಟ್ ಬಕ್ವಾಡಿ, ಮಂಜುನಾಥ್ ಮಯ್ಯ ಇದ್ದರು.
* ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಅನಿಸಿಕೆ
* ವಿದ್ಯಾರ್ಥಿಗಳಿಂದ 'ಸುಧನ್ವ ಕಾಳಗ' ಪ್ರದರ್ಶನ
ಉಡುಪಿ: ಶೈಕ್ಷಣಿಕ ಕಲಿಕೆಯೊಂದಿಗೇ ಯಕ್ಷಗಾನ ಕಲೆಯನ್ನೂ ಕಲಿತರೆ ಅಂತಹ ಮಕ್ಕಳಲ್ಲಿ ಭಾಷಾ ಜ್ಞಾನದೊಂದಿಗೆ ಭಾರತೀಯ ಪುರಾಣಗಳ ಅರಿವೂ ಉಂಟಾಗುತ್ತದೆ. ಅಲ್ಲದೆ, ಕಥಾನಕಗಳಿಂದ ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ತಿಳಿವಳಿಕೆ ಲಭಿಸುತ್ತದೆ. ಅದರಿಂದ ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಹೇಳಿದರು.
ಉಡುಪಿ ಇಂದ್ರಾಳಿಯಲ್ಲಿರುವ ಮಣಿಪಾಲ ಮಾಹೆ ಅಧೀನದ ಯಕ್ಷಗಾನ ಕೇಂದ್ರ ಶಿವಪ್ರಭಾದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಬೆಂಗಳೂರು ಮತ್ತು ಜಿಲ್ಲಾ ಇಲಾಖೆ ಸಹಕಾರದಲ್ಲಿ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ 'ಸುಧನ್ವ ಕಾಳಗ' ಯಕ್ಷಗಾನ ಪ್ರಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾಗವತರಾದ ಉಮೇಶ್ ಸುವರ್ಣ, ನಾಗಾರಾಜ್ ಶಂಕರನಾರಾಯಣ, ಬಸವ ಮುಂಡಾಡಿ (ಮದ್ದಳೆ,) ಕೃಷ್ಣಮೂರ್ತಿ ಭಟ್ ಬಕ್ವಾಡಿ (ಚಂಡೆ), ಕೇಂದ್ರದ ಸಲಹಾ ಸಮಿತಿ ಸದಸ್ಯ ಮಂಜುನಾಥ್ ಮಯ್ಯ, ಕೇಂದ್ರದ ವಿದ್ಯಾರ್ಥಿಗಳಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳು ಯಕ್ಷಗಾನ ಪ್ರದರ್ಶಿಸಿದರು.