ಉಡುಪಿಯ ಕಡೆಕಾರು ಸರ್ಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಶ್​ಪಾಲ್​ ಸುವರ್ಣ ಪೆನ್​ ವಿತರಿಸಿದರು. ರಘುನಾಥ ಕೋಟ್ಯಾನ್​, ಗಂಗಾಧರ ಜಿ., ಪ್ರದಿಪಚಂದ್ರ ಕುತ್ಪಾಡಿ, ಸುನೀಲ ಸಾಲ್ಯಾನ್​, ಶೇಖರ ಅಂಚನ್​, ದೀಪಕ ಪುತ್ರನ್​, ಜಯಕರ ಸನಿಲ್​, ನಂದಕುಮಾರ, ವನಜಾ ಜಯಕರ, ವಿನೋದಿನಿ, ಅರುಣ ಕಡೆಕಾರು, ಅಶೋಕ ಪಾಲನ್​, ವನಜಾಕ್ಷಿ ಇದ್ದರು. 
ಉಡುಪಿ

ವಿಕಸಿತ ಭಾರತ ಸಂಕಲ್ಪಕ್ಕೆ ವಿದ್ಯಾರ್ಥಿಗಳೇ ಪ್ರೇರಣೆ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಭಿಮತ

* ಮಕ್ಕಳ ದಿನದ ನಿಮಿತ್ತ 20 ಸಾವಿರ ಪೆನ್​ ವಿತರಣೆ

ಉಡುಪಿ: ವಿಶ್ವದಲ್ಲಿಯೇ ಗರಿಷ್ಠ ವಿದ್ಯಾರ್ಥಿಗಳನ್ನು ಹೊಂದಿರುವ ರಾಷ್ಟ್ರ ನಮ್ಮ ಭಾರತ. ಉಡುಪಿ ಜಿಲ್ಲೆಯು ರಾಜ್ಯದ ಪ್ರಥಮ ಸಂಪೂರ್ಣ ಸಾಕ್ಷರತಾ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಗೌರವಕ್ಕೆ ಜಿಲ್ಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಶ್ರಮವೇ ಕಾರಣ. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ನಿಮಾರ್ಣದ ಸಂಕಲ್ಪಕ್ಕೆ ವಿದ್ಯಾರ್ಥಿಗಳೇ ಪ್ರೇರಣೆಯಾಗಿದ್ದಾರೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಭಿಮತ ವ್ಯಕ್ತಪಡಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರದ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜ್​ನ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ನಿಮಿತ್ತ ಪುಷ್ಪಾನಂದ ಫೌಂಡೇಷನ್​ ವತಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ಸುಮಾರು 20 ಸಾವಿರ ಪೆನ್​ ವಿತರಣೆ ಕಾರ್ಯಕ್ರಮಕ್ಕೆ ಕಡೆಕಾರು ಸರ್ಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಶನಿವಾರ (ನ.14) ಚಾಲನೆ ನೀಡಿ ಮಾತನಾಡಿದರು.

ಶೈಕ್ಷಣಿಕ ಅಭಿವೃದ್ಧಿ

ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶಾಲಾ-ಕಾಲೇಜ್​ಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿ ನಿಲಯ ಹಾಗೂ ಶಿಕ್ಷಣಕ್ಕೆ ಪೂರಕ ವ್ಯವಸ್ಥೆಗಳ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯ ಸಹಕಾರ ನೀಡುವತ್ತ ನಿರಂತರ ಕಾರ್ಯಪ್ರವೃತ್ತನಾಗಿದ್ದೇನೆ ಎಂದರು.

ಉಡುಪಿ ಕ್ಷೇತ್ರದ ವಿವಿಧ ಶಾಲೆ ಹಾಗೂ ಕಾಲೇಜ್​ಗಳಿಗೆ ಸ್ಥಳಿಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳೊಂದಿಗೆ ತೆರಳಿ ವಿದ್ಯಾರ್ಥಿಗಳಿಗೆ ಪೆನ್​ ವಿತರಿಸಿ ಶುಭ ಹಾರೈಸಿದರು.

ಸ್ಥಳೀಯ ಮುಖಂಡರಾದ ರಘುನಾಥ ಕೋಟ್ಯಾನ್​, ಗಂಗಾಧರ ಜಿ., ಪ್ರದೀಪಚಂದ್ರ ಕುತ್ಪಾಡಿ, ಸುನೀಲ ಸಾಲ್ಯಾನ್​, ಶೇಖರ ಅಂಚನ್​, ದೀಪಕ ಪುತ್ರನ್​, ಜಯಕರ ಸನಿಲ್​, ನಂದಕುಮಾರ, ವನಜಾ ಜಯಕರ, ವಿನೋದಿನಿ, ಅರುಣ ಕಡೆಕಾರು, ಅಶೋಕ ಪಾಲನ್​, ಶಾಲೆಯ ಮುಖ್ಯೋಧ್ಯಾಪಕಿ ವನಜಾಕ್ಷಿ ಉಪಸ್ಥಿತರಿದ್ದರು.