ಉಡುಪಿಯಲ್ಲಿ ಆಯೋಜಿಸಿದ್ದ ಯುವ ಸಂಸತ್​ ಕಾರ್ಯಕ್ರಮವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಎಂ.ಎ. ಗಫೂರ್​, ದಿನಕರ ಹೇರೂರು, ರಮೇಶ ಕಾಂಚನ್​, ಸುರೇಖಾ ಕೆ., ರಾಘವೇಂದ್ರ ವರ್ಣೇಕರ್​, ಡಾ.ಯಲ್ಲಮ್ಮ ಇತರರಿದ್ದರು. 
ಉಡುಪಿ

ವಿದ್ಯಾರ್ಥಿಗಳಿಗೂ ಅಗತ್ಯ ಸಂವಿಧಾನ, ಸಂಸತ್​ನ ತಿಳಿವಳಿಕೆ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಭಿಪ್ರಾಯ

* ಯುವ ಸಂಸತ್​ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ದೇಶದ ಸಂವಿಧಾನ ಹಾಗೂ ಸಂಸತ್​ನ ಕಾರ್ಯಕಲಾಪಗಳ ಕುರಿತು ವಿದ್ಯಾರ್ಥಿಗಳಿಗೂ ತಿಳಿವಳಿಕೆ ಅಗತ್ಯ. ಆ ಕುರಿತು ಪ್ರಾಯೋಗಿಕ ಜ್ಞಾನ ನೀಡಲೆಂದು ಯುವ ಸಂಸತ್​ ಕಾರ್ಯಕ್ರಮ ಆಯೋಜಿಸಲಾಗಿದೆ. 2047ರ ವೇಳೆಗೆ ದೇಶವು ಸಂಪೂರ್ಣ ಅಭಿವೃದ್ಧಿಗೊಂಡು 'ವಿಕಸಿತ ಭಾರತ' ಆಗಬೇಕು ಎನ್ನುವುದು ನಮ್ಮೆಲ್ಲರ ಲಕ್ಷ್ಯವಾಗಿದೆ. ಅದಕ್ಕೆ ಯುವಸಮುದಾಯ ಸನ್ನದ್ಧರಾಗಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಕರೆ ನೀಡಿದರು.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜ್​ನಲ್ಲಿ ಉಡುಪಿ ತಾಲೂಕು ಆಡಳಿತ, ತಾಪಂ, ಶಿಕ್ಷಣ ಇಲಾಖೆ ಕಾನೂನು ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಕಾರದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಶುಕ್ರವಾರ (ಅ.16) ಆಯೋಜಿಸಿದ್ದ ಯುವ ಸಂಸತ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಸಕ ಯಶ್​ಪಾಲ್​ ಸುವರ್ಣ ಯುವ ಸಂಸತ್​ ಕಾರ್ಯಕ್ರಮ ಉದ್ಘಾಟಿಸಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ ಕಾಂಚನ್​, ಕಾಲೇಜ್​ನ ಪ್ರಾಂಶುಪಾಲೆ ಸುರೇಖಾ ಕೆ. ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ತಾಪಂ ಕಾರ್ಯನಿರ್ವಾಹಣಾಧಿಕಾರಿ ವಿಜಯಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ರೆನಾಲ್ಡ್​ ಪ್ರವೀಣಕುಮಾರ, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ, ತೀರ್ಪುಗಾರರಾಗಿ ಎಂಜಿಎಂ ಕಾಲೇಜ್​ನ ರಾಜ್ಯಶಾಸ್ತ್ರ ಉಪನ್ಯಾಸಕಿ ಅದಿತಿ ಭಟ್​, ನಿವೃತ್ತ ಉಪನ್ಯಾಸಕ ಸುರೇಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್​ ಸ್ವಾಗತಿಸಿದರು. ಸಿಬ್ಬಂದಿ ಶ್ರೀದೇವಿ ನಿರೂಪಿಸಿದರು. ಕಚೇರಿ ಅಧೀಕ್ಷಕಿ ವಿಜಯಲಕ್ಷ್ಮೀ ವಂದಿಸಿದರು.

ವಿಸ್ತೃತ ಸಂವಿಧಾನ ಹೊಂದಿರುವ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಮುಖ್ಯವಾಗಿ ಜೆನ್​ ಜಿ ಹಾಗೂ ಜೆನ್​-ಆಲ್ಫಾಗಳು ಸಂವಿಧಾನದ ಮತ್ತು ಸಂಸತ್​ ಬಗ್ಗೆ ಅರಿವು ಹೊಂದಲು ಯುವ ಸಂಸತ್​ ಕಾರ್ಯಕ್ರಮ ಸಹಕಾರಿ. ವಿದ್ಯಾರ್ಥಿಗಳು ದ್ವೇಷ, ಅಸೂಯೆ, ಹಿಂಸೆ ಇಲ್ಲದಂತೆ ಚರ್ಚೆ ನಡೆಸಿ ಕಾರ್ಯಕ್ರಮ ಅರ್ಥಪೂರ್ಣವಾಗಿಸಬೇಕು.
ಎಂ.ಎ. ಗಫೂರ್​. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ.