ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ದಿನಾಚರಣೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗೋಕುಲದಾಸ್ ನಾಯಕ್, ಡಾ.ಶ್ರೀಧರ್ ಆರ್. ಪೈ, ಪ್ರೊ. ವನಿತಾ ಮಯ್ಯ, ಡಾ. ಎಂ.ವಿಶ್ವನಾಥ್ ಪೈ, ಡಾ.ದೇವಿದಾಸ್ ಎಸ್. ನಾಯ್ಕ, ಪ್ರೊ.ಮಾಲತಿದೇವಿ, ಪ್ರೊ. ಶೈಲಜಾ ಎಚ್., ಪ್ರೊ.ವೀರಾ ಐಡಾ ಪಿಂಟೋ, ಪ್ರೊ.ಅನಿಲಕುಮಾರ್ ಇದ್ದರು.
* ಗೋಕುಲದಾಸ್ ನಾಯಕ್ ಅನಿಸಿಕೆ
* ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ದಿನಾಚರಣೆ
ಉಡುಪಿ: ಕಲಿಕೆ ಪದವಿಯೊಂದಿಗೆ ಅಂತ್ಯವಾಗುವುದಿಲ್ಲ. ಅದು ಜೀವನ ಪರ್ಯಂತ ನಡೆಯುವ ಪ್ರಕ್ರಿಯೆ. ಹಾಗಾಗಿ ದಿನವೂ ಹೊಸತು ಕಲಿಯುವ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದು ಕಾಲೇಜ್ನ ಹಳೆಯ ವಿದ್ಯಾರ್ಥಿ, ಮಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಡುಪಿಯ ಎಂಜಿಎಂ ಕಾಲೇಜ್ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾಲೇಜ್ನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಕಾಡೆಮಿ ಆಫ್ ಜನರಲ್ ಎಜುಕೇಷನ್ನ ಆಡಳಿತಾಧಿಕಾರಿ ಡಾ.ಶ್ರೀಧರ್ ಆರ್. ಪೈ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜ್ನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ್ ಪೈ, ಸಂಧ್ಯಾ ಕಾಲೇಜ್ನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯ್ಕ, ಪ.ಪೂ. ಕಾಲೇಜ್ನ ಪ್ರಾಂಶುಪಾಲೆ ಪ್ರೊ.ಮಾಲತಿ ದೇವಿ, ಐಕ್ಯುಎಸಿ ಸಂಯೋಜಕಿ ಪ್ರೊ. ಶೈಲಜಾ ಎಚ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ವೀರಾ ಐಡಾ ಪಿಂಟೋ, ಸಹ ಕ್ಷೇಮಪಾಲನಾಧಿಕಾರಿ ಪ್ರೊ.ಅನಿಲಕುಮಾರ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಘದ ಅಧ್ಯಕ್ಷ ನಂದನ್ ಕುಂದರ್ ಸ್ವಾಗತಿಸಿದರು. ಎಂಎಸ್ಸಿ ಪ್ರತಿನಿಧಿ ಆಶಿಶ್ ಶೆಟ್ಟಿಗಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಸಮ್ರಾ, ದೃಶ್ಯಾ ಕಾರ್ಯಕ್ರಮ ನಿರೂಪಿಸಿದರು.