ಉಡುಪಿ ಪೂರ್ಣಪ್ರಜ್ಞ ಪ.ಪೂ. ಕಾಲೇಜ್​ನಲ್ಲಿ ವಿದ್ಯಾರ್ಥಿ ಸಂಘವನ್ನು ಪ್ರಾಂಶುಪಾಲ ಕೆ. ಜಗದೀಶ್​ ನಾವುಡ ಉದ್ಘಾಟಿಸಿದರು. ಈಶಪ್ರಿಯ ಶ್ರೀ, ಡಾ. ಎ.ಪಿ. ಭಟ್​, ಟಿ. ಪ್ರಶಾಂತ್​ ಹೊಳ್ಳ, ಸಿ.ಸುರೇಶ ತುಂಗ, ಉಷಾಕಿರಣ್​, ದಿವ್ಯಾ ಇತರರಿದ್ದರು. 
ಉಡುಪಿ

ಕಲಿತ ಜ್ಞಾನ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿರಲಿ

* ಈಶಪ್ರಿಯ ತೀರ್ಥ ಶ್ರೀಪಾದರ ಆಶೀರ್ವಚನ

* ಪಿಪಿಸಿಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ಉಡುಪಿ: ಶಿಕ್ಷಣ ಸಂಸ್ಥೆಗಳು ಅಂಕ ಗಳಿಸುವುದಕ್ಕೆ ಮಾತ್ರ ಸೀಮಿತವಾಗಿ ಮಕ್ಕಳಿಗೆ ಬೋಧನೆ ಮಾಡಬಾರದು. ಅದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಕೇಂದ್ರವಾಗಿರಬೇಕು. ವಿದ್ಯಾರ್ಥಿಗಳೂ ಸಹ ತಾನು ರ್ಯಾಂಕ್​ ಗಳಿಸಬೇಕೆಂದು ಓದುವುದಕ್ಕಿಂತ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಬೇಕಾದ ಜ್ಞಾನ ಸಂಪಾದನೆಗಾಗಿ ಕಲಿಯಬೇಕೆಂಬ ಭಾವ ಮೈಗೂಡಿಸಿಕೊಳ್ಳಬೇಕು ಎಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಸ್ವಾಮೀಜಿ ನುಡಿದರು.
ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜ್​ (ಪಿಪಿಸಿ)ನಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಆತ್ಮ ವಿಶ್ವಾಸ ಅಗತ್ಯ

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ್​ ನಾವುಡ ಮಾತನಾಡಿ, ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲುಗಳನ್ನೇರಲು ಛಲ ಮತ್ತು ಆತ್ಮವಿಶ್ವಾಸ ಅಗತ್ಯ ಎಂದರು. ಹಲವು ಮಹಾನ್​ ವ್ಯಕ್ತಿಗಳ ಸಾಧನೆ ವಿವರಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್​, ಗೌರವ ಖಜಾಂಚಿ ಸಿಎ ಟಿ. ಪ್ರಶಾಂತ್​ ಹೊಳ್ಳ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಸಿ.ಸುರೇಶ ತುಂಗ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಗೌಪ್ಯ ಪ್ರಮಾಣವಚನ ಬೋಧಿಸಿದರು. 
ವಿದ್ಯಾರ್ಥಿ ನಾಯಕಿ ಆಶ್ನಿ ಸಿಯೋನಾ ಸಲ್ಡಾನಾ, ಕಾರ್ಯದರ್ಶಿ ಗೌರಿ ದೀಕ್ಷಿತ್​, ಸಹಕಾರ್ಯದರ್ಶಿ ವಿನೀತ್​ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಉಪನ್ಯಾಸಕಿ ಉಷಾಕಿರಣ್​ ಸ್ವಾಗತಿಸಿದರು. ದಿವ್ಯಾ ವಂದಿಸಿದರು. ಇಂಗ್ಲಿಷ್​ ಉಪನ್ಯಾಸಕಿ ರೋಶಿನಿ ನವೀನ್​ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.