ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ನ ಪದಗ್ರಹಣ ಕಾರ್ಯಕ್ರಮ ನಡೆಯಿತು. ಡಾ. ಕೆ.ಸುರೇಖಾ, ಕೆ. ಅಣ್ಣಪ್ಪ ಶೆಣೈ, ಕೆ.ವಿನಾಯಕ್ ಕಿಣಿ, ರೇಶ್ಮಾ ಪ್ರಭು, ದಿನೇಶ್ ಹೆಗ್ಡೆ ಆತ್ರಾಡಿ, ಶಶಿರಾಜ್ ಕುಂದರ್, ವೈಷ್ಣವಿ ಕಾಮತ್ ಇತರರಿದ್ದರು.
* ವಿದ್ಯಾರ್ಥಿಗಳಿಗೆ ಡಾ. ಕೆ.ಸುರೇಖಾ ಸಲಹೆ
* ಇಂದ್ರಾಳಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್ ಉದ್ಘಾಟನೆ
ಉಡುಪಿ: ವಿದ್ಯಾರ್ಥಿಗಳೂ ಸಹ ಶಾಲಾ ಹಂತದಲ್ಲಿಯೇ ಉತ್ತಮ ನಾಯಕತ್ವ ಹೊಂದಬೇಕು. ಜವಾಬ್ದಾರಿಯಿಂದ ತಮ್ಮ ಕಾರ್ಯ ನಿರ್ವಹಿಸಬೇಕು. ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಶೈಕ್ಷಣಿಕ ಸಾಧನೆಯೊಂದಿಗೆ ಕಲಿತ ಶಾಲೆಯ ಕೀರ್ತಿ ಇನ್ನಷ್ಟು ಎತ್ತರಕ್ಕೆ ಏರಿಸಬೇಕು ಎಂದು ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಕೆ.ಸುರೇಖಾ ಸಲಹೆ ನೀಡಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ (ಜೂ.13) ಆಯೋಜಿಸಿದ್ದ ವಿದ್ಯಾರ್ಥಿ ಸಂಸತ್ನ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಕೆ. ಅಣ್ಣಪ್ಪ ಶೆಣೈ ಅವರು ಶಾಲಾ ದಿನಚರಿ ಪುಸ್ತಕ ಬಿಡುಗಡೆ ಮಾಡಿದರು.
ಮುಖ್ಯೋಪಾಧ್ಯಾಯ ಕೆ. ವಿನಾಯಕ್ ಕಿಣಿ ವಿದ್ಯಾರ್ಥಿ ಸಂಸತ್ನ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ನಾಯಕ ಕಿಶನ್ ಎಂ.ಪಿ., ನೇತೃತ್ವದಲ್ಲಿ ವಿದ್ಯಾರ್ಥಿ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ಉಪಾಧ್ಯಕ್ಷ ಶಶಿರಾಜ್ ಕುಂದರ್, ಕೋಶಾಧಿಕಾರಿ ವೈಷ್ಣವಿ ಕಾಮತ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರೇಶ್ಮಾ ಪ್ರಭು ಉಪಸ್ಥಿತರಿದ್ದರು.
ಸಂಜನಾ, ಕೃತಿ ಬಿ., ರಿಮಾ, ರಾ ಪ್ರಾರ್ಥಿಸಿದರು. ಕಿಶನ್ ಎಂ.ಪಿ. ಸ್ವಾಗತಿಸಿದರು. ಅಭಯ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಲಿಖಿತಾ ಕಿದಿಯೂರು ವಂದಿಸಿದರು.