drowned 
ಉಡುಪಿ

ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಇಂದಿರಾ ಎನ್ ಕೆ

ಕಾಸರಗೋಡು: ವಿದ್ಯಾನಗರ ಠಾಣೆ ವ್ಯಾಪ್ತಿಯ ಉದಯಗಿರಿಯಲ್ಲಿ ಕೆರೆಗೆ ಸ್ನಾನಕ್ಕಿಳಿದ ವಿದ್ಯಾನಗರ ಚಾಲ ಬಿಎಡ್ ಸೆಂಟರ್ ಸಮೀಪದ ನಿವಾಸಿ ಅಬೂಬಕ್ಕರ್ ಎಂಬುವರ ಪುತ್ರ ಮುಹಮ್ಮದ್ ಶಾಹಿದ್(16) ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ನಾಯಮರ್‌ಮೂಲೆ ಟಿಎಚ್‌ಎಸ್‌ಎಸ್‌ನ 10ನೇ ತರಗತಿ ವಿದ್ಯಾರ್ಥಿ ಶಾಹಿದ್ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕೆರೆಗೆ ಇಳಿದಿದ್ದು, ನೀರಲ್ಲಿ ಮುಳುಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶಾಹಿದ್‌ನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.