dies-after-drowning 
ಉಡುಪಿ

ನೀರಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಇಂದಿರಾ ಎನ್ ಕೆ
ಕಾಸರಗೋಡು: ಬೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪನಯಾಲ್‌ನ ಕೊಟ್ಟಪ್ಪಾರ ಹೊಳೆಯಲ್ಲಿ ಸ್ನಾನಕ್ಕಿಳಿದಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ತಚ್ಚಂಗಾಡ್ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ, ಪನಯಾಲ್ ನೆಲ್ಲಿಯಡುಕ್ಕದ ‘ಉನ್ನತಿ’ ನಿವಾಸಿ ಅಂಶಿ ಎಂಬುವರ ಪುತ್ರ ಆದಿತ್ಯನ್ (15)ಮೃತಪಟ್ಟ ಬಾಲಕ.
ತನ್ನ ಮೂವರು ಸಹಪಾಠಿಗಳೊಂದಿಗೆ ಕೊಟ್ಟಪ್ಪಾರ ಹೊಳೆಗೆ ಸ್ನಾನಕ್ಕಾಗಿ ತೆರಳಿದ್ದ ಸಂದರ್ಭ ಆದಿತ್ಯನ್ ನೀರಿನ ಸೆಳೆತಕ್ಕೆ ಸಿಲುಕಿದ್ದನು. ತಕ್ಷಣ ಜತೆಗಿದ್ದವರು ಬೊಬ್ಬಿಡುತ್ತಿದ್ದಂತೆ, ಸ್ಥಳೀಯರು ಆಗಮಿಸಿ ಬಾಲಕನನ್ನು ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸಿದರೂ, ಪ್ರಯೋಜನವಾಗಲಿಲ್ಲ. ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.