ಮೃತಪಟ್ಟ ಬಾಲಕ ಶ್ರೀಹರಿ 
ಉಡುಪಿ

ನೇಣುಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಇಂದಿರಾ ಎನ್ ಕೆ
ಕಾಸರಗೋಡು: ಎಣ್ಮಕಜೆ ಪಂಚಾಯಿತಿ ಪೆರ್ಲ ಸನಿಹದ ಬೆದ್ರಂಪಳ್ಳದ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ 7ನೇ ತರಗತಿ ವಿದ್ಯಾರ್ಥಿಯೊಬ್ಬನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂಲತಃ ಪತ್ತನಂತಿಟ್ಟ ಜಿಲ್ಲೆಯ ಅಡೂರು ನಿವಾಸಿ ಪ್ರಕಾಶನ್-ಸುನಿತಾ ದಂಪತಿಯ ಪುತ್ರ ಶ್ರೀಹರಿ(12) ಮೃತಪಟ್ಟ ಬಾಲಕ.
ಈ ಕುಟುಂಬ ಬೆದ್ರಂಪಳ್ಳದ ಅಬ್ದುಲ್ಲಕುಞಿ ಎಂಬುವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ನಡೆಸುತ್ತಿತ್ತು. ಭಾನುವಾರ ಮಧ್ಯಾಹ್ನ ಪಾಲಕರು ಅಂಗಡಿಗೆ ತೆರಳಿದ ವೇಳೆ ಶ್ರೀಹರಿ, ಸಹೋದರ-ಸಹೋದರಿಯರೊಂದಿಗೆ ಕ್ವಾರ್ಟರ್ಸ್‌ನಲ್ಲಿ ಆಟವಾಡುತ್ತಿದ್ದರು. ಬಳಿಕ ಪಾಲಕರು ಮನೆಗೆ ವಾಪಸಾದಾಗ, ಮನೆ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿತ್ತು. ಒಡೆದು ಒಳಗೆ ಪ್ರವೇಶಿಸಿದಾಗ ಶ್ರೀಹರಿ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.