ಕುಂದಾಪುರ ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆಯನ್ನು ಕೆ.ಜಯಪ್ರಕಾಶ ಹೆಗ್ಡೆ ಉದ್ಘಾಟಿಸಿದರು. ಪ್ರಮುಖರಾದ ಸಿದ್ದಾರ್ಥ ಜೆ.ಶೆಟ್ಟಿ, ಆರ್​.ಉಪೇಂದ್ರ ಶೆಟ್ಟಿ, ರಾಮ್​ ರತನ್​ ಜೆ.ಶೆಟ್ಟಿ, ಶ್ರೀ ಸುಧಾಕರ ಹೆಗ್ಡೆ, ಡಾ.ಎಸ್​.ಎನ್​.ಭಟ್​, ಕೆ.ಟಿ.ಸತ್ಯಜಿತ್​, ಡಾ.ಪದ್ಮಚರಣ್​ ಸ್ವಾಯ್ನ, ಪ್ರೊ.ಹೇಮಲತಾ ಉಪಸ್ಥಿತರಿದ್ದರು. 
ಉಡುಪಿ

ಜೀವನ ಆದರ್ಶದಿಂದ ಯಶಸ್ಸಿನತ್ತ ಪ್ರಯತ್ನ

ಪ್ರಮುಖ ಮುಖ್ಯಾಂಶಗಳು

  • ಕೆ.ಜಯಪ್ರಕಾಶ್​ ಹೆಗ್ಡೆ ಅಭಿಪ್ರಾಯ
  • ಸಂಸ್ಥಾಪನಾ ದಿನಾಚರಣೆ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಒಂದು ಸಂಸ್ಥೆ ಕಟ್ಟುವುದು ಸುಲಭದ ಮಾತಲ್ಲ. ಜಯರಾಮ ಶೆಟ್ಟಿ ಅವರು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಈ ಭಾಗದ ಶೈಕ್ಷಣಿಕ ಚಿತ್ರಣವನ್ನೇ ಬದಲಿಸಿದ್ದಾರೆ. ಅವರ ಜೀವನ ಆದರ್ಶವಾಗಿರಿಸಿಕೊಡು ವಿದ್ಯಾರ್ಥಿಗಳು ಯಶಸ್ಸಿನತ್ತ ಸದಾ ಪ್ರಯತ್ನಿಸಬೇಕು ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್​ ಹೆಗ್ಡೆ ಹೇಳಿದರು.
ಕುಂದಾಪುರ ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶುಕ್ರವಾರ ಐಎಂಜೆ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆಯನ್ನು ಕೆ.ಜಯಪ್ರಕಾಶ ಹೆಗ್ಡೆ ಉದ್ಘಾಟಿಸಿ ಮಾತನಾಡಿದರು. ಪ್ರಮುಖರಾದ ಸಿದ್ದಾರ್ಥ ಜೆ.ಶೆಟ್ಟಿ, ಆರ್​.ಉಪೇಂದ್ರ ಶೆಟ್ಟಿ, ರಾಮ್​ ರತನ್​ ಜೆ.ಶೆಟ್ಟಿ, ಶ್ರೀ ಸುಧಾಕರ ಹೆಗ್ಡೆ, ಡಾ.ಎಸ್​.ಎನ್​.ಭಟ್​, ಕೆ.ಟಿ.ಸತ್ಯಜಿತ್​, ಡಾ.ಪದ್ಮಚರಣ್​ ಸ್ವಾಯ್ನ, ಪ್ರೊ.ಹೇಮಲತಾ ಉಪಸ್ಥಿತರಿದ್ದರು.

ಐಎಂಜೆ ಸಂಸ್ಥೆಗಳ ಅಧ್ಯಕ್ಷ ಸಿದ್ದಾರ್ಥ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಯುನಿವರ್ಸಲ್​ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಶನ್ಸ್​ ಸಂಸ್ಥಾಪಕ ಅಧ್ಯಕ್ಷ ಆರ್​.ಉಪೇಂದ್ರ ಶೆಟ್ಟಿ ಶುಭಹಾರೈಸಿದರು.
ಎಂ.ಎನ್​.ಬಿ.ಎಸ್​. ಟ್ರಸ್ಟ್​ ಟ್ರಸ್ಟಿ ರಾಮ್​ ರತನ್​ ಜೆ.ಶೆಟ್ಟಿ, ಸುಧಾಕರ ಹೆಗ್ಡೆ, ಸಂಸ್ಥೆ ಅಕಾಡೆಮಿಕ್​ ನಿರ್ದೇಶಕ ಡಾ.ಎಸ್​.ಎನ್​.ಭಟ್​, ಐಎಂಜೆ ಇನ್​ಸ್ಟಿಟ್ಯೂಟ್​ ಆಫ್​ ರಿಸರ್ಚ್​ ನಿರ್ದೇಶಕ ಕೆ.ಟಿ.ಸತ್ಯಜಿತ್​, ಡಾ.ಪದ್ಮಚರಣ್​ ಸ್ವಾಯ್ನ, ಪ್ರೊ.ಹೇಮಲತಾ ಉಪಸ್ಥಿತರಿದ್ದರು.
ಐಎಂಜೆ ಐಎಸ್​ಸಿ ಪ್ರಾಂಶುಪಾಲೆ ಡಾ.ಪ್ರತಿಭಾ ಪಟೇಲ್​ ಸ್ವಾಗತಿಸಿದರು. ಐಎಸ್​ ವಿಭಾಗ ಮುಖ್ಯಸ್ಥ ಡಾ.ಜೆ.ಪ್ರಕಾಶ ಹಾಗೂ ನರ್ಸಿಂಗ್​ ಕಾಲೇಜಿನ ಉಪಪ್ರಾಂಶುಪಾಲೆ ಪ್ರೊ.ರೂಪಶ್ರೀ ಅತಿಥಿಗಳನ್ನು ಪರಿಚಯಿಸಿದರು. ನರ್ಸಿಂಗ್​ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಜೆನ್ನಿಫರ್​ ಮೆನೇಜಸ್​ ವಂದಿಸಿದರು. ಪ್ರಾಧ್ಯಾಪಕಿ ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.