SUICIDE 
ಉಡುಪಿ

ಆಶಾಲತಾ ಆತ್ಮಹತ್ಯೆಗೆ ಒತ್ತಡ ಕಾರಣವಲ್ಲ

ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಶ್ರೇಣಿ ಕ್ಲರ್ಕ್ ಆಶಾಲತಾ ಆತ್ಮಹತ್ಯೆಗೆ ವರ್ಗಾವಣೆ ಮೂಲಕ ಉಂಟಾದ ವಾನಸಿಕ ಒತ್ತಡ ಕಾರಣವಲ್ಲ ಎಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಸಲ್ಲಿಸಿದ ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

ಎಡಿಎಂ ನೇತೃತ್ವದ ಅಧಿಕಾರಿಗಳು ನಡೆಸಿದ ತನಿಖಾ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಎಡನೀರು ಬಳಿಯ ಎದುರ್ತೋಡು ನಿವಾಸಿ ಆಶಾಲತಾ ಕರ್ತವ್ಯದಲ್ಲಿರುವಾಗಲೇ ಐಸ್‌ಕ್ರೀಂನಲ್ಲಿ ಇಲಿ ವಿಷ ಬೆರೆಸಿ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಆ.9ರಂದು ಮತಪಟ್ಟಿದ್ದರು. ಮೃತರು ಹಿಂದೆಯೇ ಖಿನ್ನತೆ ಹಾಗೂ ವಾನಸಿಕ ಹತಾಶೆಯಲ್ಲಿದ್ದರೆಂದು ವರದಿ ಉಲ್ಲೇಖಿಸಿದೆ.