ಸಂತೋಷ್ ಬೋಳಿಯಾರ್ ನಿರ್ಮಿಸಿದ 7ನೇ ನಮೋ ಕುಟೀರವನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು. ಸಂಸದ ಕ್ಯಾ.ಬ್ರಿಜೇಶ್ ಚೌಟ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಸೇವೆಯಿಂದ ಸಂಘಟನೆಗೆ ಬಲ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಉಳ್ಳಾಲ


ಸೇವೆ ಮೂಲಕ ಸಂಘಟನೆ ಬಲಪಡಿಸಬೇಕು ಎನ್ನುವ ಪ್ರಧಾನಿ ಮೋದಿ ಕರೆಯಂತೆ ಸಂತೋಷ್ ಬೋಳಿಯಾರ್ ಏಳನೇ ಮನೆ ನಿರ್ಮಿಸಿ ಸೇವಾ ಹಿ ಸಂಘಟನ್ ಕಾರ್ಯರೂಪಕ್ಕೆ ತಂದಿದ್ದು, ಓರ್ವ ಬಿಜೆಪಿ ಕಾರ್ಯಕರ್ತನಿಗೆ ಇದಕ್ಕಿಂತ ಸಂತಸ ಇನ್ನೊಂದಿಲ್ಲ. ಇಂತಹ ಕಾರ್ಯಕರ್ತರೇ ನಮಗೆ ಪ್ರೇರಣೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಶ್ಲಾಘಿಸಿದರು.
ಮೈಸೂರು ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಅಡ್ಕ ಶ್ರೀ ಭಗವತಿ ದೈವಸ್ಥಾನ ದರ್ಶನ ಪಾತ್ರಿ ಶ್ರವಣ ಬೆಳ್ಚಪ್ಪಾಡ ಅವರಿಗೆ ನಿರ್ಮಿಸಿದ 7ನೇ ಮನೆ ನಮೋ ಕುಟೀರದ ಹಸ್ತಾಂತರ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಮಾತನಾಡಿದರು. ಮಾಡೂರು ಮರಿಯಣ್ಣಪಾಲು ಶಿವದುರ್ಗಾಂಭ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಧಾನಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮನಪಾ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್, ಹಿರಿಯ ಮುಖಂಡ ಸೀತಾರಾಮ ಬಂಗೇರ, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಬಂಟರ ಸಂಘ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಮೂರೂರ ಬೋವಿ ಮಹಾಸಭಾ ಅಧ್ಯಕ್ಷ ಹರೀಶ್ ಟಿ.ಉಚ್ಚಿಲ್, ಪ್ರಮುಖರಾದ ವೀಣಾ ಎಸ್.ರೈ, ಸಮ್ಯಕ್ತ್ ರೈ, ಸ್ಪರ್ಶ ಎಸ್.ರೈ ಮೊದಲಾದವರಿದ್ದರು. ರವಿ ರೈ ಪಜೀರು ವಂದಿಸಿದರು. ಆನಂದ ಶೆಟ್ಟಿ ನಿರೂಪಿಸಿದರು.