ಬೀದಿನಾಯಿ ದಾಳಿಯಿಂದ ಗಾಯಗೊಂಡ ಮಗು.
ಕಾಸರಗೋಡು: ಮನೆ ವಠಾರದಲ್ಲಿ ಆಟವಾಡುತ್ತಿದ್ದ ಒಂದು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪ್ಪಳ ಜೋಡುಕಲ್ಲು ಕಲ್ಲಣೆ ನಿವಾಸಿ ಗುರುಪ್ರಸಾದ್ ಆಚಾರ್ಯ-ತುಳಸಿ ದಂಪತಿ ಪುತ್ರ ಋತ್‌ರಾಜ್ ಗಾಯಗೊಂಡಿದ್ದು, ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಬಟ್ಟೆ ಒಗೆದು ಒಣಗಿಸಲು ಹಾಕುತ್ತಿದ್ದ ವೇಳೆ ಮಗು ಅಂಗಳದಲ್ಲಿ ಆಟವಾಡುತ್ತಿತ್ತು. ಈ ವೇಳೆ ಬೀದಿನಾಯಿಯೊಂದು ಮನೆಯಂಗಳಕ್ಕೆ ನುಗ್ಗಿ ಮಗಿವನ ಮೇಳೆ ದಾಳಿ ಮಾಡಿದೆ. ಮಗುವಿನ ಮಖಕ್ಕೆ ಗಂಭೀರ ಗಾಯಗಳಾವೆ. ತಾಯಿ ಕೂಡಲೇ ಮಗುವನ್ನು ರಕ್ಷಿಸಿದ್ದಾರೆ.
ಇದೇ ಪರಿಸರದಲ್ಲಿ ಹುಲ್ಲು ಮೇಯಲು ಮೈದಾನದಲ್ಲಿ ಕಟ್ಟಲಾಗಿದ್ದ ಚಂದ್ರಶೇಖರ ಶೆಟ್ಟಿ ಎಂಬುವರ ದನ ಹಾಗೂ ಕರುವಿಗೆ ಬೀದಿನಾಯಿ ಕಚ್ಚಿ ಗಾಯಗೊಳಿಸಿದೆ.