ನೇತ್ರಾವತಿಯಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ.
ಉಪ್ಪಿನಂಗಡಿ: ಮುಂಗಾರು ಮತ್ತೆ ದುರ್ಬಲಗೊಂಡಿದ್ದು, ಮಳೆ ಪ್ರಮಾಣ ಗಣನೀಯ ಕುಸಿತ ಕಂಡ ಪರಿಣಾಮ ಜಿಲ್ಲೆಯ ಜೀವ ನದಿಯಾದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕುಸಿತ ಕಂಡಿದೆ.
ಭಾನುವಾರ ಮುಂಜಾನೆ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಇಳಂತಿಲ ಗ್ರಾಮದ ಗೋಪಾಲಕೃಷ್ಣ ಭಟ್ ಮನೆಗೆ ಮರ ಬಿದ್ದು ಹಾನಿಯುಂಟಾಗಿದೆ. ಉಪ್ಪಿನಂಗಡಿಯ ನಟ್ಟಿಬೈಲ್ ನಿವಾಸಿ ನಾಗೇಶ್ ಎಂಬುವರ ತೋಟದ ಅಡಿಕೆ ಮರ ಬಿದ್ದು ಹಾನಿಗೊಂಡಿದ್ದರೆ, ವೆಂಕಪ್ಪ ಗೌಡ ಎಂಬವರ ತೋಟದ ಹಣ್ಣಿನ ಮರಗಳು ಬಿರುಗಾಳಿ ಸಿಲುಕಿ ಧರೆಗುರುಳಿವೆ.
ಹೇರಂಭ ಶಾಸ್ತ್ರಿ ಎಂಬುವರ ಮನೆಯ ಮೇಲ್ಛಾವಣಿಯ ಸಿಮೆಂಟ್ ಶೀಟ್‌ಗಳು ಬಿರುಗಾಳಿಗೆ ಸಿಲುಕಿ ಹಾರಿ ಹೋಗಿವೆ. ಇದರ ಹೊರತಾಗಿ ದಿನವಿಡೀ ಬಿಸಿಲ ವಾತಾವರಣ ಇತ್ತು. ಶನಿವಾರದಂದು 25.3 ಮೀಟರ್‌ನಲ್ಲಿದ್ದ ನದಿಯ ನೀರಿನ ಮಟ್ಟ ಆದಿತ್ಯವಾರದಂದು 24 ಮೀಟರ್‌ಗೆ ಕುಸಿತ ಕಂಡಿದೆ.