ಪಚ್ಚಂಬಳ ವೈಬ್ ಪಾರ್ಕ್ ಅನ್ನು ಸ್ಥಳೀಯಾಡಳಿತ ಸಚಿವ ಕೆ.ಎಂ.ಶಾಜಿ ಉದ್ಘಾಟಿಸಿದರು. ಪ್ರಮುಖರಾದ ಎ.ಕೆ.ಎಂ.ಅಶ್ರಫ್, ರಾಜಮೋಹನ್ ಉಣ್ಣಿತ್ತಾನ್, ಸೈಪುಲ್ಲಾ ತಂಙಳ್, ಶಮೀನಾ ಟೀಚರ್ ಮೊದಲಾದವರಿದ್ದರು.  
ಉಡುಪಿ

ಸರ್ಕಾರಿ ಇಲಾಖೆಗಳಲ್ಲಿ ಹುದ್ದೆ ಭರ್ತಿಗೆ ಕ್ರಮ

ಹಿರಿಯ ನಾಗರಿಕರು ತಮ್ಮ ಸಮಯವನ್ನು ಸೃಜನಾತ್ಮಕವಾಗಿ ಕಳೆಯಲು ಪಂಚಾಯಿತಿ ಕೈಗೊಂಡಿರುವ ಯೋಜನೆಗಳನ್ನು ಸರ್ಕಾರ ಬೆಂಬಲಿಸುತ್ತದೆ. ಪಂಚಾಯಿತಿ ಈ ಯೋಜನೆಯಿಂದಾಗಿ ಬಳಕೆಯಾಗದ ಭೂಮಿಯನ್ನು ಉಪಯುಕ್ತಗೊಳಿಸಲಾಗಿದೆ . ಯುವಕರು, ವೃದ್ಧರು ಸದುಪಯೋಗಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸ್ಥಳೀಯಾಡಳಿತ ಸಚಿವ ಕೆ.ಎಂ.ಶಾಜಿ ಹೇಳಿದರು. ಮಂಗಲ್ಪಾಡಿ ಪಂಚಾಯಿತಿ ಬಂದ್ಯೋಡು ಬಳಿಯ ಪಚ್ಚಂಬಳ ವೈಬ್ ಪಾರ್ಕ್ ಉದ್ಘಾಟಿಸಿ ಮಾತನಾಡಿದರು.

ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಪಚ್ಚಂಬಳ ಅಭಿವೃದ್ಧಿ ಪುಸ್ತಕವನ್ನು ಸಚಿವ ಬಿಡುಗಡೆ ಮಾಡಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸೈಪುಲ್ಲಾ ತಂಙಳ್, ಮಂಗಲ್ಪಾಡಿ ಗ್ರಾಪಂ ಉಪಾಧ್ಯಕ್ಷೆ ಶಮೀನಾ, ಜಿಪಂ ಸದಸ್ಯ ಅಜೀಜ್ ಕಳತ್ತೂರು, ಬ್ಲಾಕ್ ಪಂಚಾಯಿತಿ ಸದಸ್ಯ ಅಜೀಜ್ ಮರಿಕೆ, ಮಂಗಲ್ಪಾಡಿ ಗ್ರಾಪಂ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಹಾರಾ, ಪ್ರಮುಖರಾದ ಜಿ.ಹನೀಫ್, ನಾಜಿಯಾ ಅಬ್ದುಲ್ ಅಜೀಜ್, ನಜಿ ಮುನೀಸಾ, ರಹಿಯಾನ ಅಬೂಬಕರ್ ತಲ್ವಾರ್, ವಸಂತ ಕುಮಾರ್, ರವೀಂದ್ರ, ಅಬ್ದುಲ್ ಹಮೀದ್ ಕಲ್ಪನಾ, ತಬ್ಸಿನಾ, ಖದೀಜತ್ ನಜೀರಾ, ಎ.ಎಚ್.ಸಹೀದ್, ಅಬೂಬಕರ್ ಸಿದ್ದೀಕ್, ಕೆ.ಅಶೋಕ, ಫಾತಿಮತ್ ಸುಹರಾ, ಸಾಕ್ಷಿ, ಎನ್.ಇ.ಪಿ.ರಾಜಮೋಹನ್, ಅಬ್ದುಲ್ ರಹಮಾನ್ ಷರೀಫ್, ರುಬೀನಾ ನೌಫಲ್, ಮಜೀದ್ ಪಚ್ಚಂಬಳ ಇದ್ದರು. ಗೋಲ್ಡನ್ ಅಬ್ದುಲ್ ರಹಮಾನ್ ಸ್ವಾಗತಿಸಿದರು. ಕೆ.ವಿನಯರಾಜ್ ವಂದಿಸಿದರು.