ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡ ಸಾಹಿತ್ಯದ ಸ್ಥಿತಿಗತಿಗಳು’ ಸಂವಾದ ನಡೆಯಿತು. ಪ್ರಮುಖರಾದ ಡಾ.ಬಿ.ಜನಾರ್ದನ ಭಟ್, ಅಶ್ವಥ್ ಎಸ್.ಎಲ್., ಡಾ.ನಾ.ಮೊಗಸಾಲೆ ಮೊದಲಾದವರಿದ್ದರು. 
ಉಡುಪಿ

ಸಾಹಿತ್ಯದಲ್ಲಿರಲಿ ಧರ್ಮ, ಸತ್ಯ ನಿಷ್ಠೆ

ಕಾರ್ಕಳ: ಕನ್ನಡ ಸಾಹಿತ್ಯ ಲೋಕದಲ್ಲಿ ಪುಸ್ತಕಗಳನ್ನು ಓದುಗರು ಮುಗಿಬಿದ್ದು ಕೊಂಡುಕೊಳ್ಳುವ ದಿನಗಳು ಬರಬೇಕು. ಸಾಹಿತ್ಯವು ಧರ್ಮ, ಸತ್ಯವನ್ನು ಹೇಳುವಂತಿರಬೇಕು. ಆಗ ಸಾಹಿತ್ಯಗಳು ಓದುಗರಿಗೆ ಹತ್ತಿರವಾಗಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಬಿ.ಜನಾರ್ದನ ಭಟ್ ಹೇಳಿದರು.

ಸಾಣೂರು ಶ್ರೀ ರಾಜೇಶ್ವರಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ 22ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡ ಸಾಹಿತ್ಯದ ಸ್ಥಿತಿಗತಿಗಳು’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಕ.ಸಾ.ಪ. ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದರು. ಸಂಸ್ಕೃತಿ ಚಿಂತಕ ಮುನಿರಾಜ ರೆಂಜಾಳ ಸಮನ್ವಯಕಾರರಾಗಿದ್ದರು.

ಹೊಸ ಓದುಗರಿಗೆ ಬೇಕಾಗಿರುವ ಸಾಹಿತ್ಯವನ್ನು ಕೊಡುವವರು ನಾವಾದರೆ ಓದುಗರ ಸಂಖ್ಯೆ ಹೆಚ್ಚಾಗಲು ಸಾಧ್ಯ. ಲೇಖಕರು ತೋಚಿದನ್ನು ಗೀಚಿ ಪುಸ್ತಕ ಪ್ರಕಟಿಸಬೇಕು ಎಂಬ ಆತುರಕ್ಕೆ ಬೀಳಬಾರದು. ಸಾಮಾಜಿಕ ಜಾಲತಾಣಗಳ ಮೂಲಕ ಓದಿನ ಹವ್ಯಾಸ ಹುಟ್ಟಿಸಿ ಕ್ರಮೇಣ ಪುಸ್ತಕದ ಓದಿನ ಕಡೆಯತ್ತ ಯುವಕರನ್ನು ಸೆಳೆಯುವ ಕೆಲಸವಾಗಬೇಕು.
ಅಶ್ವಥ್ ಎಸ್.ಎಲ್. ಸಾಹಿತಿ