ಉಡುಪಿಯಲ್ಲಿ ಆಯೋಜಿಸಿದ್ದ ಕೋ-ಆಪರೇಟಿವ್ ಬ್ಯಾಂಕ್ಗಳ ವಿಚಾರ ಸಂಕಿರಣವನ್ನು ಎಚ್.ಜಯಪ್ರಕಾಶ್ ಕೆದ್ಲಾಯ ಉದ್ಘಾಟಿಸಿದರು. ಬನಶಂಕರಿ ಎಚ್.ಆರ್., ಶಿವಕುಮಾರ್ ಗುಂಡಗಿ, ಅಂಬೋರೆ ಪಿ. ಸುರೇಶ್, ದಿನಕರ್ ಶೆಟ್ಟಿ ಅಂಪಾರು, ಹರಿಶ್ಚಂದ ಅಮೀನ್, ಕೃಷ್ಣ ಕೆ., ಮಂಜುನಾಥ್ ಎಸ್.ಕೆ., ಅನಿಲ್ ಎಚ್. ಕೆರೆಸೂರ್ ಇತರರಿದ್ದರು.
ಎಚ್.ಜಯಪ್ರಕಾಶ್ ಕೆದ್ಲಾಯ ಅನಿಸಿಕೆ
ಸಹಕಾರಿಗಳ ವಿಚಾರ ಸಂಕಿರಣ ಉದ್ಘಾಟನೆ
ಉಡುಪಿ: ಪಟ್ಟಣ ಸಹಕಾರಿ ಬ್ಯಾಂಕ್ಗಳು ಸಾಂಪ್ರದಾಯಿಕ ಹಳೆಯ ವ್ಯವಸ್ಥೆಯಿಂದ ನೂತನ ತಂತ್ರಜ್ಞಾನ ಹಾಗೂ ವೃತ್ತಿಪರ ವ್ಯವಸ್ಥೆಗೆ ಹೊಂದಿಕೊಂಡಿದೆ. ಬ್ಯಾಂಕ್ನ ನಿರ್ದೇಶಕರು ಸದಸ್ಯರ ಪ್ರತಿನಿಧಿಯಾಗಿ ಠೇವಣಿದಾರರ ರಕ್ಷಕರಾಗಿ ಬ್ಯಾಂಕ್ನ ಭವಿಷ್ಯದ ಶಿಲ್ಪಿಯಾಗಬೇಕು. ಪಾರದರ್ಶಕ ಹಾಗೂ ಜವಾಬ್ದಾರಿಯಿಂದ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್ಗಳ ಮಹಾಮಂಡಳದ ನಿರ್ದೇಶಕ ಮತ್ತು ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ನ ಅಧ್ಯಕ್ಷ ಎಚ್.ಜಯಪ್ರಕಾಶ್ ಕೆದ್ಲಾಯ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಲೀಕೋ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್ಗಳ ಮಹಾಮಂಡಳದ ವತಿಯಿಂದ ರಾಜ್ಯದ ಎಲ್ಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿರುವ ಎಲ್ಲ ಪಟ್ಟಣ ಸಹಕಾರ ಬ್ಯಾಂಕ್ಗಳ ಬಗ್ಗೆ ಮಹಾಮಂಡಳದ ಅಧ್ಯಕ್ಷ ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ಕೈಗೊಳ್ಳುತ್ತಿರುವ ಉಪಯುಕ್ತ ಸಲಹೆ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಅರ್ಬನ್ ಬ್ಯಾಂಕ್ಗಳಲ್ಲಿ ಹೊಸ ಪೀಳಿಗೆಯವರು ವ್ಯವಹಾರ ನಡೆಸಬೇಕಾದರೆ ತಂತ್ರಜ್ಞಾನ ಅಳವಡಿಕೆ ಹಾಗೂ ಬಳಕೆ ಕುರಿತು ತಿಳಿಸಲಾಯಿತು.
ಮಹಾಮಂಡಳದ ನಿರ್ದೇಶಕರಾದ ಬನಶಂಕರಿ ಎಚ್.ಆರ್., ಶಿವಕುಮಾರ್ ಗುಂಡಗಿ, ಅಂಬೋರೆ ಪಿ. ಸುರೇಶ್, ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ನ ಅಧ್ಯಕ್ಷ ದಿನಕರ್ ಶೆಟ್ಟಿ ಅಂಪಾರು, ನಾರಾಯಣ ಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನ ಅಧ್ಯಕ್ಷ ಹರಿಶ್ಚಂದ ಅಮೀನ್, ಲೀಕೋ ಬ್ಯಾಂಕ್ನ ಅಧ್ಯಕ್ಷ ಕೃಷ್ಣ ಕೆ., ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ನ ವೃತ್ತಿಪರ ನಿರ್ದೇಶಕ ಮಂಜುನಾಥ್ ಎಸ್.ಕೆ. ಉಪಸ್ಥಿತರಿದ್ದರು.
ಮಹಾಮಂಡಳದ ಡೆಪ್ಯುಟಿ ಸಿಇಒ ಅನಿಲ್ ಎಚ್. ಕೆರೆಸೂರ್ ಸ್ವಾಗತಿಸಿದರು. ಲೀಕೋ ಬ್ಯಾಂಕ್ನ ಇಒ ಶಶಿಕಲಾ ಪುರುಷೋತ್ತಮ್ ವಂದಿಸಿದರು. ಮಹಾಮಂಡಳದ ಗೌರವ ಸಲಹೆಗಾರರಾದ ಸುಧಾಕರ್ ಭಟ್ ಹಾಗೂ ಡಾ. ಗುರುಸ್ವಾಮಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.