ಉಡುಪಿ ಶ್ರೀಕೃಷ್ಣ ಮಠದಲ್ಲಿ ವೇದವರ್ಧನ ಶ್ರೀಗಳು 'ಕೃಷ್ಣ ರಂಗ' ರಾಜ್ಯಮಟ್ಟದ ರೀಲ್ಸ್​ ಸ್ಪರ್ಧೆಯ ಪೋಸ್ಟರ್​ ಬಿಡುಗಡೆ ಮಾಡಿದರು. ಡಾ. ಗಣೇಶಪ್ರಸಾದ್​ ಜಿ. ನಾಯಕ್​, ರಾಘವೇಂದ್ರ ಪ್ರಭು ಕರ್ವಾಲು, ಉದಯ್​ ನಾಯ್ಕ್​ ಇದ್ದರು. 
ಉಡುಪಿ

ವಿಟ್ಲಪಿಂಡಿಯಂದು 'ಕೃಷ್ಣ ರಂಗ' ರೀಲ್ಸ್​ ಸ್ಪರ್ಧೆ

* ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಯೋಜನೆ

* ಪ್ರಥಮ 10 ಸಾವಿರ ರೂ. ಬಹುಮಾನ

ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ 'ಉಡುಪಿಗೆ ಬನ್ನಿ' ವತಿಯಿಂದ ಹಾಗೂ ಎನ್​.ಎನ್​. ಇನ್ಫ್ರಾಸ್ಟ್ರಕ್ಚರ್​ ಡೆವೆಲಪರ್ಸ್​, ಚಿತ್ರಕೂಟ ಆಯುರ್ವೇದ, ಅನಂತ ವೈದಿಕ ಕೇಂದ್ರ ಉಡುಪಿ ಸಹಕಾರದಲ್ಲಿ ವಿಟ್ಲಪಿಂಡಿ ನಿಮಿತ್ತ 'ಕೃಷ್ಣ ರಂಗ' ರಾಜ್ಯ ಮಟ್ಟದ ರೀಲ್ಸ್​ ಸ್ಪರ್ಧೆ ಆಯೋಜಿಸಲಾಗಿದೆ.
ಉಡುಪಿ ಮಠದಲ್ಲಿ ಈ ಸ್ಪರ್ಧೆಯ ಪೋಸ್ಟರ್​ಅನ್ನು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿ, ಸ್ಪರ್ಧೆಯು ಯಶಸ್ವಿಯಾಗಲಿ ಎಂದು ಅನುಗ್ರಹಿಸಿದರು.
ಉಡುಪಿಗೆ ಬನ್ನಿ ನಿರ್ವಾಹಕ ಡಾ. ಗಣೇಶಪ್ರಸಾದ್​ ಜಿ. ನಾಯಕ್​, ಕಸಾಪ ಉಡುಪಿ ತಾಲೂಕು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಹ್ಯೂಮನ್​ ರೈಟ್ಸ್​ ಫೆಡರೇಷನ್​ ಆಫ್​ ಇಂಡಿಯಾದ ಉಡುಪಿ ವಿಭಾಗೀಯ ಅಧ್ಯಕ್ಷ ಉದಯ್​ ನಾಯ್ಕ್​ ಉಪಸ್ಥಿತರಿದ್ದರು.

ಸ್ಪರ್ಧೆಯ ವಿವರ

ಸ್ಪರ್ಧಿಗಳು ಸೆ.5ರಂದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆಯುವ ವಿಟ್ಲಪಿಂಡಿಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಆಯ್ದ ಅಂಶಗಳನ್ನು ರೀಲ್ಸ್​ನಲ್ಲಿ ಪ್ರಸ್ತುತಪಡಿಸಬೇಕು. ರೀಲ್ಸ್​ಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಪ್ರಕಟಿಸಿ 'ಉಡುಪಿಗೆ ಬನ್ನಿ' ಕೊಲೇಬೊರೇಟ್​ ಮಾಡಬೇಕು. ರೀಲ್ಸ್​ ಕಳುಹಿಸಲು ಸೆ.15 ಕೊನೆಯ ದಿನ. ಸೆ.19ರಂದು ಫಲಿತಾಂಶ ಪ್ರಕಟಿಸಲಾಗುವುದು.
ಪ್ರಥಮ 10 ಸಾವಿರ ರೂ. ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಐದು ಸಾವಿರ ರೂ. ಪ್ರಶಸ್ತಿ ಪತ್ರ, 5 ಮಂದಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.