ಜನ್ಮಾಷ್ಟಮಿ ನಿಮಿತ್ತ ಆಯೋಜಿಸಿರುವ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪೋಸ್ಟರ್​ಅನ್ನು ಪರ್ಯಾಯ ಶೀರೂರು ವೇದವರ್ಧನ ಶ್ರೀಗಳು ಬಿಡುಗಡೆಗೊಳಿಸಿದರು. ಎಸ್​ಕೆಪಿಎ ಉಡುಪಿ ವಲಯದ ಅಧ್ಯಕ್ಷ ದಿವಾಕರ್​ ಹಿರಿಯಡ್ಕ, ಮಾಜಿ ಅಧ್ಯಕ್ಷ ಜನಾರ್ದನ್​ ಕೊಡವೂರು, ಸದಸ್ಯರಾದ ರತನ್​ ಶೆಟ್ಟಿ, ಶ್ರೀಶ ಬಲ್ಲಾಳ್​ ಹಾಗೂ ಶ್ರೀಮಠದ ಛಾಯಾಗ್ರಾಹಕ ಕೃತಿಕ್​ ಭಟ್​ ಇದ್ದರು. 
ಉಡುಪಿ

ಜಗದೊಡೆಯನ ಜನ್ಮಾಷ್ಟಮಿ; ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

* ಎಸ್​ಕೆಪಿಎಯಿಂದ 'ಕರ್ಲಸ್​ ಆಫ್​ ಶ್ರೀಕೃಷ್ಣ' ಆಯೋಜನೆ

ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ ಸೌತ್​ ಕೆನರಾ ಫೋಟೋಗ್ರಾಫರ್ಸ್​ ಅಸೋಸಿಯೇಷನ್​ ಉಡುಪಿ ವಲಯದ ವತಿಯಿಂದ ಹಾಗೂ ಲಯನ್ಸ್​ ಕ್ಲಬ್​ ಮುನಿಯಾಲು ಸಹಕಾರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ 'ಕರ್ಲಸ್​ ಆಫ್​ ಶ್ರೀಕೃಷ್ಣ' ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.
ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ 5 ಸಾವಿರ ರೂ., ತೃತೀಯ 3 ಸಾವಿರ ರೂ. ಹಾಗೂ 5 ಸಮಾಧಾನಕರ ಬಹುಮಾನ, ಅಭಿನಂದನಾ ಪತ್ರ, ಸ್ಮರಣೆಕೆ ಇರಲಿದೆ.

ಸ್ಪರ್ಧೆಯ ನಿಯಮ

ಪ್ರತಿ ಸ್ಪರ್ಧಿಯು ಗರಿಷ್ಠ 4 ಛಾಯಾಚಿತ್ರ ಕಳುಹಿಸಬಹುದು. ಒಂದು ಛಾಯಾಚಿತ್ರದ ಗಾತ್ರ ಗರಿಷ್ಠ 4 ಎಂಬಿಗಿಂತ ಹೆಚ್ಚು ಇರಬಾರದು. ಮೊಬೈಲ್​ ಬಳಸಿ ತೆಗೆದ ಫೋಟೋ ಕಳುಹಿಸುವಂತಿಲ್ಲ. ಫೋಟೋಶಾಪ್​ನಲ್ಲಿ ತಿರುಚಲಾದ ಮತ್ತು ವಾಟರ್​ ಮಾರ್ಕ್​ ಇರುವ ಚಿತ್ರಗಳನ್ನೂ ಪರಿಗಣಿಸುವುದಿಲ್ಲ. ಎಲ್ಲರಿಗೂ ಮುಕ್ತ ಅವಕಾಶವಿದ್ದು, ಛಾಯಾಚಿತ್ರವನ್ನು ಇ-ಮೇಲ್​ ಮೂಲಕ ಕಳುಹಿಸುವಾಗ ತಮ್ಮ ಭಾವಚಿತ್ರ, ಹೆಸರು, ವಿಳಾಸ, ದೂರವಾಣಿ ಹಾಗೂ ನೋಂದಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. 

ಲಿತಾಂಶ

ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ಸೆ.4ರಂದು ನಡೆಯುವ ಜನ್ಮಾಷ್ಟಮಿ ಹಾಗೂ ಸೆ.5ರಂದು ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ ಮಹೋತ್ಸವದ ಛಾಯಾಚಿತ್ರಗಳಿಗೆ ಮಾತ್ರ ಅವಕಾಶ. ಛಾಯಾಚಿತ್ರ ಕಳುಹಿಸಲು ಸೆ.15 ಕೊನೆಯ ದಿನವಾಗಿದ್ದು, ಸೆ.25ಕ್ಕೆ ಫಲಿತಾಂಶ ಪ್ರಕಟಿಸಲಾಗುವುದು. ಛಾಯಾಚಿತ್ರಗಳನ್ನು ಕಳಹಿಸುವವರು ಹೆಸರನ್ನು rameshyelluru@gmail.com ಈ ಇ-ಮೇಲ್​ ಮೂಲಕ ಸೆ.1ರ ಒಳಗಾಗಿ ನೋಂದಾಯಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ.