ಕುಂಡಂಗುಳಿಯ ಸಾವಿತ್ರಿ ಭಾಯಿಫುಲೆ ವಸತಿ ಶಾಲೆ ನೂತನ ಕಟ್ಟಡ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅಧಿಕಾರಿಗಳಿಂದ ವಾಹಿತಿ ಪಡೆದರು. ಪ್ರಮುಖರಾದ ಇ.ಕುಞಿರಾಮನ್, ಮುರಳಿ, ರಂಜಿನಿ, ಕೆ.ವಿ.ರಾವನ್ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕುಂಡಂಗುಳಿಯ ಸಾವಿತ್ರಿ ಭಾಯಿಫುಲೆ ವಸತಿ ಶಾಲಾ ಕಟ್ಟಡದ ಕಾಮಗಾರಿಯನ್ನು ಶೀಘ್ರವೇ ಪೂರ್ತಿಗೊಳಿಸಿ ಜುಲೈ 15ರೊಳಗೆ ಹೊಸ ಕಟ್ಟಡಕ್ಕೆ ತರಗತಿಗಳನ್ನು ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಸೂಚನೆ ನೀಡಿದ್ದಾರೆ.
ಶಾಲೆಗೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳು ಹಾಗೂ ನ್ಯೂನತೆಗಳನ್ನು ಪರಿಶೀಲಿಸಿದರು. ಹೊಸ ಕಟ್ಟಡದ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಪ್ರಸಕ್ತ ಶಾಲೆಯಲ್ಲಿ 250ರಷ್ಟು ಮಕ್ಕಳಿಗೆ ಅವಕಾಶ ಕಲ್ಪಿಸಲು ಸೀಮಿತ ಸ್ಥಳಾವಕಾಶವಿರುವ ಹಿನ್ನೆಲೆಯಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಶಿಫಾರಸು ವಾಡಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಹಳೆಯ ಕಟ್ಟಡದಲ್ಲಿಯೇ ವಸತಿ ಸೌಲಭ್ಯ ಮುಂದುವರಿಯಲಿವೆ. ಮಕ್ಕಳನ್ನು ನೂತನ ಶಾಲೆಗೆ ಕರೆದೊಯ್ಯಲು ಎರಡು ಬಸ್ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬೇಡಡ್ಕ ಗ್ರಾಪಂ ಅಧ್ಯಕ್ಷ ಇ.ಕುಞಿರಾಮನ್, ಪಿಟಿಎ ಅಧ್ಯಕ್ಷ ಮುರಳಿ, ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ರಂಜಿನಿ, ಬುಡಕಟ್ಟು ಅಭಿವದ್ಧಿ ಅಧಿಕಾರಿ ಕೆ.ವಿ.ರಾವನ್, ಸಹಾಯಕ ಬುಡಕಟ್ಟು ಅಭಿವೃದ್ಧಿ ಅಧಿಕಾರಿ ಕೆ.ಎಂ.ಪ್ರಸನ್ನ, ಮುಖ್ಯಶಿಕ್ಷಕಿ ಕೆ.ವೀಣಾ, ಹಿರಿಯ ಅಧೀಕ್ಷಕ ಗಿರೀಶ್, ಶಾಲಾ ವ್ಯವಸ್ಥಾಪಕ ಪ್ರಶಾಂತ್ ಕುವಾರ್ ಉಪಸ್ಥಿತರಿದ್ದರು.
ಅಧ್ಯಯನಕ್ಕೆ ಲ್ಯಾಪ್‌ಟಾಪ್ ಮಂಜೂರು
ಅಧ್ಯಯನಕ್ಕೆ ಅನುಕೂಲವಾಗಲು 10 ಲ್ಯಾಪ್‌ಟಾಪ್ ಮತ್ತು ಸಂವಹನ ಫಲಕವನ್ನು ಶಾಲೆಗೆ ಮಂಜೂರುಗೊಳಿಸಲಾಗುವುದು. ಈಗಾಗಲೇ ಇಬ್ಬರು ದಾದಿಯರಿದ್ದು, ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಇನ್ನಿಬ್ಬರು ದಾದಿಯರನ್ನು ನೇಮಿಸಲಾಗುವುದು. ಹೊಸ ಕಟ್ಟಡಕ್ಕೆ ಸ್ವೀಪರ್ ಮತ್ತು ಕಾವಲುಗಾರರನ್ನು ನೇಮಿಸಲಾಗುವುದು. ಶಾಲೆಯ ಹೊಸ ಬ್ಲಾಕ್‌ನಲ್ಲಿ ಹಾಸ್ಟೆಲ್ ನಿರ್ಮಿಸಲಾಗುವುದು. ಟೆಂಡರ್ ಪ್ರಕ್ರಿಯೆ ಶ್ರೀ ಪೂರ್ಣಗೊಳಿಸಿ ನಿರ್ವಾಣ ಕಾರ್ಯ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ತಿಳಿಸಿದರು.