notice 
ಉಡುಪಿ

ಹಳಸಿದ ಆಹಾರ ಪದಾರ್ಥ ವಶ

ಇಂದಿರಾ ಎನ್ ಕೆ
ಕಾಸರಗೋಡು: ನಗರಸಭೆಯ ವ್ಯಾಪ್ತಿಯಲ್ಲಿರುವ ವಿವಿಧ ಹೋಟೆಲ್‌ಗಳಲ್ಲಿ ಕಾಸರಗೋಡು ನಗರಸಭೆಯ ಆರೋಗ್ಯ ಇಲಾಖೆ ನಡೆಸಿದ ತಪಾಸಣೆ ವೇಳೆ ಬಳಕೆಗೆ ಯೋಗ್ಯವಲ್ಲದ ಹಾಗೂ ಹಳಸಿದ ಆಹಾರ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.
ಓಷನ್ ಸೀ ಫುಡ್, ಲೆ ಬ್ಯಾಂಬೂ ರೆಸ್ಟೋರೆಂಟ್, ಹೋಟೆಲ್ ಡಿಲಕ್ಸ್ ಮತ್ತು ಚಾಯ್ ಕೆಫೆ ಮುಂತಾದ ಸಂಸ್ಥೆಗಳಿಂದ ಹಳಸಿದ ಆಹಾರ ಪದಾರ್ಥ ವಶಪಡಿಸಿ ನಾಶಪಡಿಸಿದ್ದಾರೆ. ಇನ್‌ಸ್ಪೆಕ್ಟರ್ ಮಧು ಕೆ. ಹಾಗೂ ಪಿಎಚ್‌ಐಗಳಾದ ಶೀನಾ, ವೈಶಾಖ್, ಮುಬಾಶಿರ್, ನೌಫಿಯಾ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.