ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಎಸ್​ಟಿ ಮೋರ್ಚಾದ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರ ವಿತರಿಸಲಾಯಿತು. ಕುತ್ಯಾರು ನವೀನ್​ ಶೆಟ್ಟಿ, ಭುಜಂಗ ನಾಯ್ಕ್​, ಉಮೇಶ್​ ನಾಯ್ಕ್​, ಶ್ರೀಕಾಂತ್​ ನಾಯಕ್​, ದಿನಕರ್​ ಶೆಟ್ಟಿ ಹೆರ್ಗ, ಉಮೇಶ್​ ಎ. ನಾಯ್ಕ್​ ಚೇರ್ಕಾಡಿ ಇತರರಿದ್ದರು. 
ಉಡುಪಿ

ಬಿಜೆಪಿಯಿಂದ 'ಸರ್ವ ಸ್ಪರ್ಶಿ-ಸರ್ವ ವ್ಯಾಪಿ' ಜನಸೇವೆ

 ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಭಿಪ್ರಾಯ

* ಜಿಲ್ಲಾ ಎಸ್​ಟಿ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ

ಉಡುಪಿ: ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯು ದೇಶದ ಎಲ್ಲ ವರ್ಗಗಳ ಜನತೆಯನ್ನು ತಲುಪಿದ್ದು, 'ಸರ್ವ ಸ್ಪರ್ಶಿ-ಸರ್ವ ವ್ಯಾಪಿ'ಯಾಗಿ ಜನಸೇವೆ ಮಾಡುತ್ತಿದೆ. ಆ ನಿಟ್ಟಿನಲ್ಲಿ ಬಿಜೆಪಿ ಎಸ್​ಟಿ ಮೋರ್ಚಾ ಪದಾಧಿಕಾರಿಗಳು ಮತ್ತು ಸದಸ್ಯರು ತಮ್ಮ ಜವಾಬ್ದಾರಿ ಅರಿತು ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಲಾನುಭವಿಗಳ ಮನೆಗೇ ತಲುಪಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಸಲಹೆ ನೀಡಿದರು.
ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್​ಟಿ ಮೋರ್ಚಾದ ಪದಗ್ರಹಣ ಹಾಗೂ ನೂತನ ಅಧ್ಯಕ್ಷ, ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರ ವಿತರಿಸಿ ಮಾತನಾಡಿದರು.
ಜಿಲ್ಲಾ ಎಸ್​ಟಿ ಮೋರ್ಚಾದ ನೂತನ ಅಧ್ಯಕ್ಷ ಭುಜಂಗ ನಾಯ್ಕ್​ ಮಾತನಾಡಿ, ಮೋರ್ಚಾದ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಕೋರಿದರು. ಜಿಲ್ಲಾ ಎಸ್​ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್​ ನಾಯ್ಕ್​ ನೂಜಿನಬೈಲ್​, ವಿವಿಧ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಮೇಶ್​ ಎ. ನಾಯ್ಕ್​ ಚೇರ್ಕಾಡಿ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀಕಾಂತ್​ ನಾಯಕ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ್​ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಎಸ್​ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಭಾಷ್​ ನಾಯ್ಕ್​ ಪೆರ್ಡೂರು ವಂದಿಸಿದರು.