ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಪಾಲ್ಗೊಂಡರು. ಸೇವಾಕರ್ತರಾದ ಕೆ.ಕೃಷ್ಣಮೋಹನ್ ಪೈ ಕಟಪಾಡಿ, ವಿಜಯಾ ಪೈ, ಪುರುಷೋತ್ತಮ ಪೈ, ಕೆ.ಸತ್ಯೇಂದ್ರ ಪೈ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ತಿರುಪತಿ ತಿರುಮಲ ದೇವಸ್ಥಾನ ನೇತೃತ್ವದಲ್ಲಿ ಕೆ.ಕೃಷ್ಣಮೋಹನ್ ಪೈ ಯುಎಸ್‌ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಮತ್ತು ಕುಟುಂಬಸ್ಥರ ವತಿಯಿಂದ ಕಟಪಾಡಿ ಎಸ್‌ವಿಎಸ್ ವಿದ್ಯಾವರ್ಧಕ ಸಂ ಹಾಗೂ ಕಟಪಾಡಿ ಮತ್ತು ಆಸುಪಾಸಿನ ನಾಗರಿಕರು, ಗಣ್ಯರು, ಸಂ-ಸಂಸ್ಥೆಗಳ ಪದಾಧಿಕಾರಿಗಳು, ದೇವಸ್ಥಾನ ದೈವಸ್ಥಾನಗಳ ಆಡಳಿತ ಮಂಡಳಿ ಸಹಕಾರದೊಂದಿಗೆ ಎಸ್‌ವಿಎಸ್ ಶಾಲಾ ಕ್ರೀಡಾಂಗಣದಲ್ಲಿ ಶನಿವಾರ ಅದ್ದೂರಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಂಡಿತು.
ಸಂಜೆ ಕಟಪಾಡಿ ಪೇಟೆಗೆ ಆಗಮಿಸಿದ ಶ್ರೀನಿವಾಸ ದೇವರನ್ನು ವೈಭವಯುತ ಮೆರವಣಿಗೆಯಲ್ಲಿ ಕಲ್ಯಾಣ ಮಂಟಪದ ವೇದಿಕೆಗೆ ಕರೆ ತರಲಾಯಿತು. ಬಳಿಕ ಶ್ರೀದೇವರ ವಿವಾಹ ಮಂಟಪ ಪ್ರವೇಶ, ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತಿ ದೇವಿಯ ಆಗಮನ, ಸ್ವರ್ಣಮಣಿ ಬಂಧನ, ಮುಹೂರ್ತ ನಿರೀಕ್ಷಣೆ, ವಾಲಾ ಧಾರಣೆ ನಡೆದು ಗೋಧೋಳಿ ಲಗ್ನ ಸುಮುಹೂರ್ತದಲ್ಲಿ ಶ್ರೀ ಶ್ರೀನಿವಾಸ ದೇವರಿಗೆ ಶ್ರೀ ಪದ್ಮಾವತಿ ದೇವಿಯ ಕನ್ಯಾದಾನ, ಶ್ರೀನಿವಾಸ ಕಲ್ಯಾಣೋತ್ಸವ ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚರಣೆ, ಮಹಾಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಯನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು. ಕಲ್ಯಾಣೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ತಿರುಪತಿ ಲಡ್ಡು ಪ್ರಸಾದ ವಿತರಿಸಲಾಯಿತು.
ಸೇವಾಕರ್ತರಾದ ಕೆ.ಕೃಷ್ಣಮೋಹನ್ ಪೈ ಕಟಪಾಡಿ, ವಿಜಯಾ ಪೈ, ಪುರುಷೋತ್ತಮ ಪೈ, ಕೆ.ಸತ್ಯೇಂದ್ರ ಪೈ, ಶಾಸಕರಾದ ಕಿರಣ್ ಕುವಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ನಟ ರಮೇಶ್ ಭಟ್ ಕಟಪಾಡಿ, ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ಪ್ರೇಮ್ ಕುವಾರ್, ಜಿಪಂ ವಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಆಶಾ ಅಂಚನ್, ತುಳಸಿ ದೇವಾಡಿಗ, ಜಗನ್ನಾಥ್ ಕೋಟೆ, ವಿದ್ಯಾವರ್ಧಕ ಸಂದ ಸದಸ್ಯರಾದ ನಿತ್ಯಾನಂದ ಶೆಣೈ, ಬಿ.ಚಂದ್ರಕಾಂತ್ ಪೈ, ವೆಂಕಟರಮಣ ಭಟ್, ಕೃಷ್ಣಾನಂದ ಕಾಮತ್, ಗಣೇಶ್ ಕಿಣಿ, ಶ್ರೀನಿವಾಸ ಕಿಣಿ, ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ ಪ್ರಮುಖರಾದ ಕಾರ್ತಿಕ್ ಪಾಲನ್, ಗಣೇಶ್ ಕುವಾರ್ ಉದ್ಯಾವರ, ಕಿಶೋರ್ ಅಂಬಾಡಿ, ಯೋಗೀಶ್ ದುಗ್ಗುಪ್ಪಾಡಿ, ರಾಜೇಶ್ ಶ್ರೀಯಾನ್, ನಾಗೇಶ್ ಕಾಮತ್, ಶಂಕರ್ ಸಾಲ್ಯಾನ್, ಶ್ರೀನಿವಾಸ ಶೆಣೈ, ಯಶವಂತ್ ದೇವಾಡಿಗ, ಉಮೇಶ್ ಕಾಮತ್, ದಿನಕರ ಪೈ, ಭಾರತಿ ಪೈ, ಅಶ್ವಿನಿ ಅಂಚನ್, ಹರಿಶ್ಚಂದ್ರ ಪೈ, ಪ್ರಶಾಂತ್ ಆರ್.ಎಸ್., ಜಗದೀಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಕಲಿಯುಗದ ಅಧಿದೇವತೆ ಶ್ರೀನಿವಾಸ ದೇವರು. ಕೃಷ್ಣ ಬೇರೆ ಅಲ್ಲ ಶ್ರೀನಿವಾಸ ಬೇರೆ ಅಲ್ಲ. ಕೃಷ್ಣನನ್ನು ಆರಾಧಿಸಿ ಆ ಕಾರ್ಯದ ಫಲಗಳನ್ನು ನಾವು ಪಡೆಯುತ್ತಿದ್ದೇವೆ. ಲೋಕ ಸಂಚಾರ ಮೂಲಕ ಕಲ್ಯಾಣ ವಾಡಿಕೊಡು ಶ್ರೀನಿವಾಸ ಎಲ್ಲ ಭಕ್ತರಿಗೂ ಅನುಗ್ರಹ ವಾಡುತ್ತಿದ್ದಾರೆ.