ಮದ್ದಡ್ಕದಲ್ಲಿ ಆಯೋಜಿಸಿದ್ದ ಶ್ರೀರಾಮನವಮಿ ಧಾರ್ಮಿಕ ಸಭೆಯಲ್ಲಿ ದಿನೇಶ್ ಮೂಲ್ಯ ಕೊಂಡೆವಾರು ವಾತನಾಡಿದರು. ಪ್ರಮುಖರಾದ ಮನೋಹರ ಕೇದಳಿಕೆ, ಪ್ರೀತಂ ಆಚಾರ್ಯ, ವಿನೋದ್ ಶೆಣೈ ಇತರರಿದ್ದರು. 
ಉಡುಪಿ

ಮದ್ದಡ್ಕದಲ್ಲಿ ಶ್ರೀರಾಮನವಮಿ ಆಚರಣೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮದ್ದಡ್ಕದ ಶ್ರೀರಾಮ ಸೇವಾ ಸಮಿತಿ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮದಡ್ಕ ಶಾಖೆಯ ಜಂಟಿ ಆಶ್ರಯದಲ್ಲಿ ಶ್ರೀರಾಮನವಮಿ ಆಚರಿಸಲಾಯಿತು. ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಎಂ.ರುರಾಮ್ ಭಟ್ ವೈದಿಕ ವಿಧಿ ವಿಧಾನಗಳ ನೆರವೇರಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆವಾರು, ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮನೋಹರ ಕೇದಳಿಕೆ, ಕಾರ್ಯದರ್ಶಿ ಪ್ರೀತಂ ಆಚಾರ್ಯ ವಿಶ್ವ ಹಿಂದೂ ಪರಿಷತ್ ಮದ್ದಡ್ಕ ಶಾಖೆ ಕಾರ್ಯದರ್ಶಿ ವಿನೋದ್ ಶೆಣೈ, ಭಜರಂಗದಳ ಮದ್ದಡ್ಕ ಟಕದ ಸಂಚಾಲಕ ಯಶೋಧರ ಶೆಟ್ಟಿ ಅರ್ಕಜೆ, ಮದ್ದಡ್ಕ ಶ್ರೀ ರಕ್ತೇಶ್ವರಿ ಮತ್ತು ಪಿಲಿಚಾಮುಂಡಿ ದೈವಸ್ಥಾನದ ಸೇವಾ ಟ್ರಸ್ಟ್ ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಷ್ಣು ಮರಾಠೆ, ಭಜರಂಗದಳ ಬೆಳ್ತಂಗಡಿ ಪ್ರಖಂಡ ಸಂಯೋಜಕ ಪ್ರಭಾಕರ ಮಚ್ಚಿನ, ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು, ಪ್ರೀತಂ ಆಚಾರ್ಯ, ಗಣೇಶ್ ಶೆಟ್ಟಿ ಅರ್ಕಜೆ, ವಿನೋದ್ ಶೆಣೈ ಮದ್ದಡ್ಕ ಉಪಸ್ಥಿತರಿದ್ದರು.

ಧಾರ್ಮಿಕ ಸಭಾ ಕಾರ್ಯಕ್ರಮ

ಭಜನಾ ಮಂಗಳೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮನೋಹರ ಕೇದಳಿಕೆ ಅಧ್ಯಕ್ಷತೆ ವಹಿಸಿದ್ದರು. ಸಾವಾಜಿಕ ಕಾರ್ಯಕರ್ತ ಉಮೇಶ್ ನಡ್ತಿಕಲ್ಲು ಧಾರ್ಮಿಕ ಉಪನ್ಯಾಸ ನೀಡಿದರು. ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಶೈಲೇಶ್ ವಂದಿಸಿದರು. ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕುಡ್ಲ ವಿಧಾಶ್ರೀ ಕಲಾವಿದರಿಂದ ‘ಜೈ ಹನುವಾನ್’ ನಾಟಕ ಪ್ರದರ್ಶನಗೊಂಡಿತು. ಶ್ರೀರಾಮ ಸೇವಾ ಸಮಿತಿಯ ಪದಾಧಿಕಾರಿಗಳು, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಪದಾಧಿಕಾರಿಗಳು ಸಹಕರಿಸಿದರು.