ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಚೆಸ್ ಟ್ರೋಫಿಯನ್ನು ರಾಘವೇಂದ್ರ ವೈ.ಟಿ. ಉದ್ಘಾಟಿಸಿದರು. ಹರಿಪ್ರಸಾದ್ ಸುಳ್ಯ, ಉಮಾನಾಥ್ ಕಾಪು, ವಾಣಿ ಪಾಣಿಕ್ಕರ್, ಸಾಕ್ಷಾತ್ ಯು.ಕೆ. ಇದ್ದರು. 
ಉಡುಪಿ

ಚೆಸ್ ಕ್ರೀಡೆಯಿಂದ ಮಕ್ಕಳಲ್ಲಿ ಏಕಾಗ್ರತೆ ವೃದ್ಧಿ

* ವಕೀಲ ರಾಘವೇಂದ್ರ ವೈ.ಟಿ. ಅನಿಸಿಕೆ

* ಶ್ರೀ ನಾರಾಯಣ ಗುರು ಟ್ರೋಫಿ ಉದ್ಘಾಟನೆ

ಉಡುಪಿ: ನಾವೆಲ್ಲರೂ ಕಂಪ್ಯೂಟರ್ ಯುಗದಲ್ಲಿದ್ದೇವೆ. ಇಂತಹ ಸಂದರ್ಭದಲ್ಲೂ ವಿದ್ಯಾರ್ಥಿಗಳು ಚೆಸ್‌ನಂತಹ ಬೌದ್ಧಿಕ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಈ ಕ್ರೀಡೆಯಿಂದ ಏಕಾಗ್ರತೆ ಹಾಗೂ ಚಿಂತನಾ ಸಾಮರ್ಥ್ಯ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳ ಬೆಳವಣಿಗೆಗೆ ಹೆತ್ತವರು ಸಮಯ ಮೀಸಲಿಟ್ಟು ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದು ವಕೀಲ ರಾಘವೇಂದ್ರ ವೈ.ಟಿ. ಹೇಳಿದರು. 
ಮಾಣಿಪಾಲದ ಡಾ. ಟಿಎಂಎ ಪೈ ಹಾಲ್‌ನಲ್ಲಿ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ವತಿಯಿಂದ ಹಾಗೂ ಅಫಿಲಿಯೆನ್ಸ್ ಟೆಕ್ನಾಲಜಿ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ನಾರಾಯಣ ಗುರು 30ನೇ ಚೆಸ್ ಟ್ರೋಫಿ ಉದ್ಘಾಟಿಸಿ ಮಾತನಾಡಿದರು. 
ಹರಿಪ್ರಸಾದ್ ಸುಳ್ಯ ಹಾಗೂ ರಾಘವೇಂದ್ರ ವೈ.ಟಿ. ಅವರು ಚೆಸ್ ಕಾಯಿಯನ್ನು ಮುನ್ನಡೆಸುವ ಮೂಲಕ ಸಾಂಕೇತಿಕವಾಗಿ ಸ್ಪರ್ಧೆಗೆ ಚಾಲನೆ ನೀಡಿದರು.
ನಾರಾಯಣ ಗುರು ಸ್ಪೋರ್ಟ್ಸ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ್ ಕಾಪು ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಉಪಾಧ್ಯಕ್ಷೆ ವಾಣಿ ಪಾಣಿಕ್ಕರ್ ಉಪಸ್ಥಿತರಿದ್ದರು. 
ಸಂಸ್ಥೆಯ ಸ್ಥಾಪಕ ಸಾಕ್ಷಾತ್ ಯು.ಕೆ. ಸ್ವಾಗತಿಸಿದರು. ನಿರ್ದೇಶಕಿ ಸೌಂದರ್ಯಾ ಯು.ಕೆ. ವಂದಿಸಿದರು. ಬಾಬು ಜೆ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.